ಸುಳ್ಯ:ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ ಅವರಿಗೆ ಆಯುಷ್ಶ್ರೀ ಪ್ರಶಸ್ತಿ ಲಭಿಸಿದೆ.ಜ.31 ಮತ್ತು ಫೆ.1 ರಂದು ಮಂಗಳೂರಿನ ಟಿ ಎಂ ಎ ಪೈ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಆಯುಷ್ ಹಬ್ಬ-2026ರ ಅಂಗವಾಗಿ
ಆಯುಷ್ ವೈದ್ಯಕೀಯ ಪದ್ಧತಿಯಲ್ಲಿ ಸಾಧನೆಗೈದವರಿಗೆ ಕೊಡಮಾಡುವ ಆಯುಷ್ ಶ್ರೀ ಪುರಸ್ಕಾರಕ್ಕೆ ಡಾ ಲೀಲಾಧರ್ ಡಿ ವಿ ಯವರು ಭಾಜನರಾಗಿದ್ದು, ಅವರ ಆಯುರ್ವೇದ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.





