ಸುಳ್ಯ:ಸುಳ್ಯದಲ್ಲಿ ಡಿ.10ರಂದು ಸಂಜೆಯ ವೇಳೆಗೆ ಹನಿ ಮನೆಯಾಗಿದೆ. ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇದ್ದು ಸಂಜೆಯ ವೇಳೆಗೆ ಹನಿ ಮಳೆ ಸುರಿದಿದೆ.ಈ ಮಧ್ಯೆ ಫೆಂಗಲ್ ಚಂಡಮಾರುತದ ಬೆನ್ನಲ್ಲೇ ಮತ್ತೊಂದು ಚಂಡ ಮಾರುತ ಸೃಷ್ಠಿಯಾಗಲಿದ್ದು ಡಿ.13ರ ಬಳಿಕ ವಿವಿಧೆಡೆ
ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಮತ್ತೊಂದು ಚಂಡಮಾರುತ ಸೃಷ್ಠಿಯಾಗಲಿದೆ. ಇದರ ಪರಿಣಾಮ ಡಿಸೆಂಬರ್ 13ರಿಂದ ನಾಲ್ಕು ದಿನಗಳ ಕಾಲ ರಾಜ್ಯದ ವಿವಿಧೆಡೆ ಮಳೆಯಾಗಲಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು,ಮೈಸೂರು, ಮಂಡ್ಯ, ಹಾಸನ, ದಾವಣಗೆರೆ, ಚಾಮರಾಜನಗರ, ಹಾವೇರಿಯಲ್ಲಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ.ಬಂಗಾಳಕೊಳ್ಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಯುಭಾರ ಕುಸಿತ ಕಂಡು ಬಂದಿದ್ದು, ಇದರಿಂದ ಉಂಟಾದ ವೈಪರಿತ್ಯದ ಕಾರಣದಿಂದಾಗಿ, ಬಂಗಾಳಕೊಲ್ಲಿಯಲ್ಲಿ ಚಂಡ ಮಾರುತ ಸೃಷ್ಠಿಯಾಗುವ ಸಾಧ್ಯತೆ ಇದೆ ಎಂದು ಸೂಚನೆ ನೀಡಲಾಗಿದೆ.