ಸುಳ್ಯ:ಸುಳ್ಯ ಪೊಲೀಸ್ ಠಾಣೆ ಯಲ್ಲಿ ಹಿರಿಯ ನಾಗರಿಕರ ಸಭೆ ನಡೆಯಿತು. ಸಭೆಯಲ್ಲಿ ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಲಾಯಿತು.ಸುಳ್ಯ ಎಸ್ಐ ದಿಲೀಪ್ ಮಾತನಾಡಿ ‘ ಇಂದು ಮಾನವ ಸಂಬಂಧಗಳು ದೂರವಾಗುವುದರಿಂದ ಹಣ, ಭೋಗ ಜೀವನದ ಆಮಿಷದಿಂದ ಸೈಬರ್ ಕ್ರೈಂ ಗಳು ಹೆಚ್ಚಳಕ್ಕೆ ಕಾರಣವಾಗಿದೆ. ಆದುದರಿಂದ ಜನರು ಜಾಗೃತಿ
ವಹಿಸಬೇಕಾಗಿದೆ. ಹೊರಗಿನವರನ್ನು ಕೆಲಸಕ್ಕೆ ಸೇರಿಸುವಾಗ ದಾಖಲೆ ಪಡಕೊಳ್ಳಬೇಕು.ಇಲಾಖೆ ಸೈಬರ್ ಕ್ರೈಂ ಪತ್ತೆ ಹಚ್ಚಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿ ಎಲ್ಲಾ ಪ್ರಯತ್ನ ನಡೆಸಲಾಗುತಿದೆ ಎಂದು ಹೇಳಿದರು.ತಾಲೂಕು ಪಿಂಚಣಿದಾರರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗು ವಿಶ್ರಾಂತ ಪ್ರಾoಶುಪಾಲ ಪ್ರೊ.ದಾಮೋದರ ಗೌಡ, ಸಮರ್ಪಣಾ ಸಂಸ್ಥೆಯ ಅಧ್ಯಕ್ಷೆ ಕಮಲಾಕ್ಷಿ ಟೀಚರ್, ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ, ಉಮ್ಮರ್ ಕುರುಜಿಗುಡ್ಡೆ, ರಾಮಚಂದ್ರ ಮುಳ್ಯ, ನಿವೃತ್ತ ಆರೋಗ್ಯ ಸಿಬ್ಬಂದಿ ಹೊಳ್ಳ, ಮೊದಲಾದದವರು ಅನಿಸಿಕೆ ವ್ಯಕ್ತಪಡಿಸಿದರು. ಸಭೆಯಲ್ಲಿ ಪಿಂಚಣಿದಾರರ ಸಂಘದ ಅಧ್ಯಕ್ಷ ಡಾ. ರಂಗಯ್ಯ, ಬೆಳ್ಯಪ್ಪ ಗೌಡ ಬಿ. ಬಾಪುಸಾಹೇಬ್, ಚೆನ್ನಕೇಶವ ಜಾಲ್ಸೂರು ,ನಿವೃತ್ತ ಉಪನ್ಯಾಸಕ ಅಬ್ದುಲ್ಲ ಆರಂತೋಡು, ಉಬೆದುಲ್ಲಾ ಕಟ್ಟೆಕ್ಕಾರ್ಸ್, ದೇವಿದಾಸ್, ಕೇಶವ ಮಾಸ್ಟರ್, ಲಿಂಗಪ್ಪ ಗೌಡ, ವೈ. ಕೆ. ರಮಾ ಮೊದಲಾದರು ಭಾಗವಹಿಸಿದ್ದರು
ಎಎಸ್ಐ ತಾರನಾಥ್, ಸಿಬ್ಬಂದಿ ಮೌಲಾನ ಮೊದಲಾದವರು ಸಹಕರಿಸಿದರು.