ಸುಳ್ಯ:ಶಿಕ್ಷಣದ ಜೊತೆಗೆ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪೋಷಿಸಿದರೆ ಯಶಸ್ಸು ಗಳಿಸಲು ಸಾಧ್ಯ. ಆದುದರಿಂದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಇತರ ಪಠ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ನಾಟಕ ಹಾಗೂ ಚಿತ್ರ ನಟ ಪ್ರಕಾಶ್ ತುಮಿನಾಡು ಹೇಳಿದ್ದಾರೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹಾಗೂ ಸುಳ್ಯದ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ವತಿಯಿಂದ ನಡೆದ ಅಂತರ್ ಕಾಲೇಜು ಮಹಿಳಾ ಮತ್ತು ಪುರುಷರ ಗುಡ್ಡಗಾಡು ಓಟದ
ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ
ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿ
ಮಾತನಾಡಿದರು. ಯಾವುದೇ ಕೆಲಸ ಇರಲಿ, ಯಾವುದೇ ಕ್ಷೇತ್ರ ಇರಲಿ ಅದನ್ನು ಪ್ರೀತಿಸಬೇಕು ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡಿದಾಗ ಯಶಸ್ಸು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಕೆ.ವಿ.ಜಿ.ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಎಒಎಲ್ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು.

ವಿಜಯ ಶ್ರೀಹರಿ ಪಿ.ಎಂ.

ಲಾವಣ್ಯ.ಎನ್.
ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಕ್ರೀಡಾಪಟು ನಮಿತಾ ಜಿ.ಕೆ., ಹುಬ್ಬಳ್ಳಿ ಕರ್ನಾಟಕ ಕಾನೂನು ವಿಶ್ವ ವಿದ್ಯನಿಲಯದ ಕ್ರೀಡಾ ನಿರ್ದೇಶಕ ಡಾ.ಖಾಲಿದ್ ಖಾನ್, ಎಒಎಲ್ಇಯ ಕಾರ್ಯದರ್ಶಿ ಕೆ.ವಿ.ಹೇಮನಾಥ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಉದಯಕೃಷ್ಣ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಲೆಫ್ಟಿನೆಂಟ್ ಸೀತಾರಾಮ ಎಂ.ಡಿ. ವಂದಿಸಿದರು.
ಕಾಲೇಜಿನ ಸ್ಟೂಡೆಂಟ್ ವೆಲ್ಫೇರ್ ಆಫೀಸರ್ ಟೀನಾ ಎಚ್.ಎಸ್ ಹಾಗೂ ಉಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಕೆವಿಜಿ ಕಾನೂನು ಕಾಲೇಜಿನ ಅಧೀಕ್ಷಕರಾದ ಗೋಪಿನಾಥ್ ಕೆ,
ಕ್ರೀಡಾ ಸಂಯೋಜಕರಾದ ಲಕ್ಷ್ಮೀಕಾಂತ್ ಕೆ.ಎಲ್ ಮತ್ತಿತರರು ಸಹಕರಿಸಿದರು.
ಗುಡ್ಡ್ಅಡು ಓಟದವಿಜೇತರು: ಅಂತರ್ ಕಾಲೇಜು ಮಹಿಳಾ ಮತ್ತು ಪುರುಷರ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಪುರುಷ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ವಿಜಯ ಶ್ರೀಹರಿ ಪಿ.ಎಂ.ಹಾಗೂ ಮಹಿಳಾ ವಿಭಾಗದಲ್ಲಿ ಸುಳ್ಯ ಕೆವಿಜಿ ಕಾನೂನು ಕಾಲೇಜಿನ ಲಾವಣ್ಯ ಎನ್ ವೈಯುಕ್ತಿಕ ಪ್ರಶಸ್ತಿ ಪಡೆದರು.
ಪುತ್ತೂರು ವಿವೇಕಾನಂದ ಕಾನೂನು ಮಹಾ ವಿದ್ಯಾಲಯ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಸಮಗ್ರ ಚಾಂಪಿಯನ್ಶಿಪ್ ಪಡೆದುಕೊಂಡಿತು.


ವಿವೇಕಾನಂದ ಕಾಲೇಜು, ಪುರುಷ ಮಹಿಳಾ ತಂಡ
ಪುರುಷ ವಿಭಾಗದಲ್ಲಿ ತುಮಕೂರು ವಿದ್ಯೋಧಯ ಲಾ ಕಾಲೇಜಿನ ಜೀವನ್ ಪಟೇಲ್ ಆರ್.ಕೆ. ದ್ವಿತೀಯ, ಚಿಕ್ಕೋಡಿ ಕೆಎಲ್ಇ ಸೊಸೈಟಿ ಕಾಲೇಜಿನ ಹಾಲಪ್ಪ ಎಸ್.ಕಂಠಿಕಾರ್, ತೃತೀಯ ಸ್ಥಾನ ಹಾಗೂ ಪುತ್ತೂರು ವಿವೇಕಾನಂದ ಕಾಲೇಜಿನ ಅಶ್ವಿತ್ ಕುಮಾರ್ ಚತುರ್ಥ ಬಹುಮಾನ ಪಡೆದರು. ಮಹಿಳಾ ವಿಭಾಗದಲ್ಲಿ ಮಂಗಳೂರು ಎಸ್ಡಿಎಂ ಕಾಲೇಜಿನ ಬಿಂದುಶ್ರೀ ಎಸ್ ದ್ವಿತೀಯ, ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಜ್ಞಾ, ತೃತೀಯ ಹಾಗೂ ವಿವೇಕಾನಂದ ಕಾಲೇಜಿನ ವೃಂದಾ ಚತುರ್ಥ ಸ್ಥಾನ ಪಡೆದರು.
ಪುತ್ತೂರು ವಿವೇಕಾನಂದ ಕಾಲೇಜು ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಸಮಗ್ರ ಪ್ತಶಸ್ತಿ ಪಡೆದುಕೊಂಡಿದೆ. ಪುರುಷ ವಿಭಾಗದಲ್ಲಿ ಆರ್.ಎಲ್. ಲಾ ಕಾಲೇಜು ದಾವಣಗೆರೆ ದ್ವಿತೀಯ, ಚಿಕ್ಕೋಡಿ ಕೆ.ಎಲ್.ಇ ಸೊಸೈಟಿ ಲಾ ಕಾಲೇಜು ತೃತೀಯ, ಚಿತ್ರದುರ್ಗದ ಸರಸ್ವತಿ ಲಾ ಕಾಲೇಜು ಚತುರ್ಥ, ಸರಕಾರಿ ಕಾನೂನು ಕಾಲೇಜು ಕೋಲಾರ 5 ನೇ ಸ್ಥಾನ ಹಾಗೂ ಕೆವಿಜಿ ಕಾನೂನು ಕಾಲೇಜು 6ನೇ ಸ್ಥಾನ ಪಡೆದುಕೊಂಡಿತು.

ಕೆವಿಜಿ ಕಾನೂನು ಕಾಲೇಜು ತಂಡ
ಳಮಹಿಳಾ ವಿಭಾಗದಲ್ಲಿ ಕೆವಿಜಿ ಕಾನೂನು ಕಾಲೇಜು ದ್ವಿತೀಯ ಸ್ಥಾನ ಪಡೆದು ಕೊಂಡರೆ, ಬೆಂಗಳೂರು ಕ್ರಿಸ್ತು ಜಯಂತಿ ಕಾಲೇಜು ತೃತೀಯ, ಸರಕಾರಿ ಕಾನೂನು ಕಾಲೇಜು ಹಾಸನ, ಚತುರ್ಥ, ರಾಮಯ್ಯ ಲಾ ಕಾಲೇಜು 5 ಮತ್ತು ಸರಸ್ವತಿ ಲಾ ಕಾಲೇಜು 6ನೇ ಸ್ಥಾನ ಪಡೆದುಕೊಂಡಿತು.
ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ 26 ಕಾಲೇಜುಗಳಿಂದ 138 ಪುರುಷರು ಹಾಗೂ 89 ಮಹಿಳೆಯರು ಸೇರಿ ಒಟ್ಟು 227 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ನಡೆದ ಸ್ಪರ್ಧೆ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಆರಂಭಗೊಂಡು 10 ಕಿಲೋಮೀಟರ್ ದೂರ ಕ್ರಮಿಸಿ ಎನ್ಎಂಸಿ ಮೈದಾನದಲ್ಲಿ ಸಮಾಪನಗೊಂಡಿತು.









