ಸುಳ್ಯ: ಬಿಜೆಪಿ ಯುವ ಮೋರ್ಚಾ ನಾಯಕ, ಸಾಮಾಜಿಕ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದು ಅತ್ಯಂತ ದುಃಖ ಮತ್ತು ಕಳವಳಕಾರಿ ವಿಷಯವಾಗಿದೆ ಇದನ್ನು ತೀವ್ರವಾಗಿ ಖಂಡಿಸುವುದಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಹೇಳಿದೆ. ಜಿಲ್ಲೆಯಲ್ಲಿ ಶಾಂತಿ
ಸೌಹಾರ್ದತೆಯ ದಿಕ್ಕು ತಪ್ಪಿರುವುದು ಮತ್ತು ಇಂದಿನ ಸಮಾಜವು ಯಾವಕಡೆಗೆ ಹೋಗುತ್ತಿದೆ ಎಂಬುದು ಆತಂಕಕಾರಿಯಾಗಿದೆ.
ದೇಶದ ಪ್ರಜೆಯಾದ ಪ್ರತಿಯೊಬ್ಬನು ಸಹ ಈ ದೇಶದ ಆಸ್ತಿ. ಪರಸ್ಪರ ದ್ವೇಷ, ಅಸೂಯೆ, ಸ್ವಾರ್ಥ ಮನೋಭಾವನೆಯಿಂದ ಅಮಾಯಕರ ಮೇಲೆ ಆಗುತ್ತಿರುವ ಈ ರೀತಿಯ ಕೃತ್ಯ ಖಂಡನೀಯ. ಈ ಘಟನೆಯನ್ನು ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಈ ಕೃತ್ಯ ಎಸಗಿದವರನ್ನು ಮತ್ತು ಇದರ ಹಿಂದೆ ಇರುವ ಕಾಣದ ಕೈ ಗಳನ್ನು ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮತ್ತು ಅಮಾಯಕರ ಬಲಿಗೆ ನ್ಯಾಯ ಒದಗಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಗೋಕುಲ್‌ದಾಸ್ ಮತ್ತು ಬ್ಲಾಕ್ ಮಾಧ್ಯಮ ಸಂಯೋಜಕ ಭವಾನಿಶಂಕರ್ ಕಲ್ಮಡ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.