ಮೇನಾಲ:11ಜನರ ಲೀಗ್ ಮಾದರಿಯ 10 ತಂಡವನ್ನು ಒಳಗೊಂಡ ಕ್ರಿಕೆಟ್ ಪಂದ್ಯಾಟ ಶ್ರೀ ‘ಮುತ್ತಪ್ಪನ್ ಟ್ರೋಫಿ’ ಮೇನಾಲ ಶಾಲಾ ಮೈದಾನದಲ್ಲಿ ನಡೆಯಿತು.ಪ್ರಥಮ ಸ್ಥಾನವನ್ನು ಸದಾನಂದ ರೈ ಮಾಲಕತ್ವದ ಶೀವಿಷ್ಣು ಮೇನಾಲ ತಂಡ ಗೆದ್ದುಕೊಂಡಿತು. ದ್ವೀತಿಯ ಸ್ಥಾನವನ್ನು ಸುಬ್ರಹ್ಮಣ್ಯ ಕಾಂತಮಂಗಲ ತಂಡ ಪಡೆದುಕೊಂಡಿತು. ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸಾದ್ ರೈ ವಿಜೇತರಿಗೆ ಬಹುಮಾನ ವಿತರಿಸಿದರು. ಪ್ರಮುಖರಾದ ರಂಜಿತ್ ರೈ ಮೇನಾಲ, ಪ್ರದೀಪ್ ಪೂಜಾರಿ, ಸೌಕತ್ ಬೇಲ್ಯ ಮುಖ್ಯ ಅತಿಥಿಗಳಾಗಿದ್ದರು.













