ಸುಳ್ಯ: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಮಧ್ಯೆ ನಡೆಯುವ ವಿಶ್ವಕಪ್ ಕ್ರಿಕೆಟ್ ಫೈನಲ್ನ ನೇರ ಪ್ರಸಾರ ಸುಳ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದ ಕ್ರೀಡಾಂಗಣದಲ್ಲಿ ದೊಡ್ಡ ಪರದೆಯಲ್ಲಿ ಪ್ರದರ್ಶಿಸಲಾಗುವುದು. ಇಂದು ಕಬಡ್ಡಿ ಪಂದ್ಯಾಟ ವೀಕ್ಷಿಸಲು ಆಗಮಿಸುವವರಿಗೆ ಒಂದೇ ವೇದಿಕೆಯಲ್ಲಿ ಕಬಡ್ಡಿ ಮತ್ತು ಕ್ರಿಕೆಟ್ ನೋಡುವ ಅವಕಾಶ ಸಿಗಲಿದೆ ಎಂದು ಕಬಡ್ಡಿ ಸಂಘಟನಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.








