ವಿರಾಜಪೇಟೆ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಸಮೀಪದ ಕಂಡಂಗಾಲ ಗ್ರಾಮದ ಬಳಿ 35 ವರ್ಷದ ಗಂಡಾನೆಯನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದರು. ಈ ಆನೆಯು ಕಳೆದ ಹಲವು ತಿಂಗಳುಗಳಿಂದ ಈ ಭಾಗದಲ್ಲಿ ಕೃಷಿ ಭೂಮಿಯ ಮೇಲೆ ದಾಳಿ ನಡೆಸಿ, ಬೆಳೆಗಳನ್ನು ನಾಶಪಡಿಸಿತ್ತು. ಇದರ ಸೆರೆಗೆ
ಭಾನುವಾರ ಬೆಳಿಗ್ಗೆಯಿಂದಲೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಅಭಿಮನ್ಯು, ಪ್ರಶಾಂತ, ಹರ್ಷ ಸೇರಿದಂತೆ 4 ಸಾಕಾನೆಗಳ ನೆರವಿನಿಂದ ಕಾರ್ಯಾಚರಣೆ ನಡೆಸಿದ್ದರು. ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ, ಸೆರೆ ಹಿಡಿದು, ರೇಡಿಯೊ ಕಾಲರ್ ಅಳವಡಿಸಿದರು. ವಿರಾಜಪೇಟೆ ತಾಲ್ಲೂಕಿನ ಅಮ್ಮತಿ ಸಮೀಪ ಒಂಟಿಯಂಗಡಿ ಗ್ರಾಮದ ಸುತ್ತಮುತ್ತ ಕೃಷಿ ಫಸಲು ನಾಶ ಮಾಡಿ ಕಾರ್ಮಿಕರು ಹಾಗೂ ಮಾಲೀಕರಲ್ಲಿ ಕಾಡಾನೆ ಆತಂಕ ಸೃಷ್ಟಿಸಿತ್ತು.
ಒಂಟಿಯಂಗಡಿಯ ಕಾಫಿ ತೋಟವೊಂದರಲ್ಲಿ ಏಳು ಕಾಡಾನೆಗಳೊಂದಿಗೆ ಕಾಣಿಸಿಕೊಂಡ 32 ವರ್ಷದ ಪುಂಡಾನೆಯನ್ನು ಸಾಕಾನೆಗಳ ಸಹಕಾರದಿಂದ ಅರೆವಳಿಕೆ ನೀಡಿ ಸೆರೆ ಹಿಡಿಯಲಾಯಿತು. ಬಳಿಕ ಲಾರಿಗೆ ಹತ್ತಿಸಿ ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರಕ್ಕೆ ಸ್ಥಳಾಂತರಿಸಲಾಯಿತು.