ಪಂಜ: ಸುಳ್ಯ ವಿಧಾನಸಭಾ ಕ್ಷೇತ್ರದ ಸಹಕಾರಿ ಜನಪ್ರತಿನಿಧಿಗಳ ಸಭೆ ಪಂಜ ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಜಿಲ್ಲಾ ಸಹಕಾರಿ ಪ್ರಕೋಷ್ಠದ ಅಧ್ಯಕ್ಷ ರಾಜಾರಾಮ್ ಭಟ್ ಭಾಗವಹಿಸಿ ಮಾತನಾಡಿ ಸಹಕಾರಿ ಪ್ರತಿನಿಧಿಗಳು ಗ್ರಾಮ ಮಟ್ಟದಲ್ಲಿ
ಮೋದಿ ಸರಕಾರದ ಸಾಧನೆಗಳು ಹಾಗೂ ಜನಪರ ಕಾರ್ಯಕ್ರಮಗಳನ್ನು ಸಾಮಾನ್ಯ ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಸುಳ್ಯ ಮಂಡಲದ ಸುಮಾರು 50 ಮಂದಿ ಸಹಕಾರಿ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಪ್ರಮುಖರಾದ ದಾಮೋದರ ಗುಂಡ್ಯ, ಗಣೇಶ ಪೈ, ಮುಗುಪ್ಪು ಕೂಸಪ್ಪ ಗೌಡ, ಆರ್.ಕೆ.ಭಟ್ ಕುರುಂಬುಡೇಲು, ವೆಂಕಟ್ ದಂಬೆಕೋಡಿ, ವಿಕ್ರಂ ಅಡ್ಪಂಗಾಯ, ನಾರಾಯಣ ಬೊಮ್ಮೆಟ್ಟಿ, ಜಯಪ್ರಕಾಶ್ ಕೂಜುಗೋಡು, ಚಂದ್ರಶೇಖರ ಶಾಸ್ತ್ರಿ, ಸಂತೋಷ್ ಜಾಕೆ ಮತ್ತಿತರರು ಉಪಸ್ಥಿತರಿದ್ದರು.







