ಸುಳ್ಯ: ಸುಳ್ಯ ನಗರ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿಯಲ್ಲಿ ನಡೆಯಿತು .ಕಾರ್ಯಕರ್ತರನ್ನು ಉದ್ದೆಶಿಸಿ ಮಾತನಾಡಿದ ಬ್ಲಾಕ್ ಅಧ್ಯಕ್ಷ ಪಿ ಸಿ ಜಯರಾಮ್ ಸುಳ್ಯದಲ್ಲಿ ಎಲ್ಲರು ಒಟ್ಟಾಗಿ ಜೊತೆಗೂಡಿ ಕೆಲಸ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸಲು
ಪಣತೊಡಬೇಕು ಎಂದು ಹೇಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ ನಗರದಾದ್ಯಂತ ನಾಯಕರು ಮತ್ತು ಕಾರ್ಯಕರ್ತರು ಜೊತೆಯಾಗಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಬೇಕು ಸರಕಾರದ ಗ್ಯಾರಂಟಿ ಯೋಜನೆ ಜನ ಮೆಚ್ಚುವ ಕಾರ್ಯಕ್ರಮವಾಗಿದೆ ಆದ್ದರಿಂದ ಈ ಸಲ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆಲುವು ಖಚಿತ ಎಂದರು.
ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ಮಾತನಾಡಿ ಎಲ್ಲರೂ ಉತ್ಸಾಹದಿಂದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪ್ರಯತ್ನ ನಡೆಸಬೇಕು ಎಂದರು.
ಅರೆಭಾಷೆ ಅಕಾಡಮಿ ರರಾಜ್ಯಾದ್ಯಕ್ಷರಾದ ಸದಾನಂದ ಮಾವಜಿ,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಪಿ ಎಸ್ ಗಂಗಾಧರ,ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಪ್ರಧಾನ ಕಾರ್ಯದರ್ಶಿ ಮುಸ್ತಫ ಕೆ ಎಂ . ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ರಾಜು ಪಂಡಿತ್,
ಸಿದ್ದೀಕ್ ಕೋಕ್ಕೊ, ರಿಯಾಜ್ ಕಟ್ಟೆಕಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಪ್ರಮುಖರಾದ ರಹೀಂ, ಬೀಜದಕಟ್ಟೆ, ಸಂಶುದ್ದೀನ್, ಹನೀಫ್ ಬೀಜಕೋಚಿ, ಅಬ್ದುಲ್ ರಹಿಮಾನ್, ಮೊಗರ್ಪಣೆ, ಶಹೀದ್ ಪಾರೆ, ನೌಶಾದ್ ಕೆರಮೂಲೆ,
ನಝೀರ್ ಶಾಂತಿನಗರ, ಮನ್ಸೂರ್, ಬಷೀರ್ ಆರ್.ಬಿ. ಗಣೇಶ್ ನಾಗಾಪಟ್ನ, ಇಕ್ಬಾಲ್ ಸುಣ್ಣಮೂಲೆ,ಅಶ್ರಫ್ ಕಲ್ಲುಮುಟ್ಲು, ಮಹೇಶ್ ಕಲ್ಲುಮುಟ್ಲು. ಮೊಯಿದೀನ್, ರಾಜೇಶ್ ನಾವೂರು. ವೇಣುಗೋಪಾಲ್ . ಮತ್ತಿತರು ಉಪಸ್ತಿತರಿದ್ದರು