ಸುಳ್ಯ: ಮಂಗಳೂರಿನಲ್ಲಿ ಜ.21ರಂದು ನಡೆಯಲಿರುವ ಕಾಂಗ್ರೆಸ್ ಸಮಾವೇಶದ ಪೂರ್ವಭಾವಿ ಸಭೆ ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಿತು. ಸಮಾವೇಶಕ್ಕೆ ಪ್ರತಿ ಬೂತ್ನಿಂದ 10 ಮಂದಿ ಕಾರ್ಯಕರು ಭಾಗವಹಿಸಲು ನಿರ್ಧರಿಸಲಾಯಿತು.ಸಮಾವೇಶಕ್ಕೆ ಕಾರ್ಯಕರ್ತರನ್ನು ಕರೆದೊಯ್ಯಲು ಪ್ರಮುಖರಿಗೆ ಜವಾಬ್ದಾರಿ ಹಂಚಲಾಯಿತು.
ಕಾರ್ಯಕರ್ತರ ಅಸಮಾಧಾನ:
ಪಕ್ಷ ಅಧಿಕಾರಕ್ಕೆ ಬಂದು 9 ತಿಂಗಳಾದರೂ
ಜಿಲ್ಲಾ ಉಸ್ತುವಾರಿ ಸಚಿವರು ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಇದುವರೆಗೆ ಬಾರದೇ ಇರುವುದಕ್ಕೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಸುಳ್ಯದಲ್ಲಿ ನಡೆಯುವ ವಿವಿಧ
ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಜನಪ್ರತಿನಿಧಿಗಳು, ಮುಖಂಡರು ಬಾರದೇ ಇರುವುದಕ್ಕೆ ಕೆಲವು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು, ಪಕ್ಷದ ವಿಧಾನ ಪರಿಷತ್ ಸದಸ್ಯರು ಸುಳ್ಯಕ್ಕೆ ಬಾರದ ಬಗ್ಗೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಅಕ್ರಮ ಸಕ್ರಮ ಸಮಿತಿ ನೇಮಕ್ಕೆ ಹೆಸರು ಕಳಿಸಿದ್ದು ಯಾರು ಎಂದು ಕೆಲವು ಕಾರ್ಯಕರ್ತರು ಪ್ರಶ್ನಿಸಿದರು. ಕೋರ್ ಕಮಿಟಿಯಲ್ಲಿ ನಿರ್ಧಾರ ಆಗಿತ್ತು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹೇಳಿದರು. ಕೋರ್ ಕಮಿಟಿಯಲ್ಲಿ ಸದಸ್ಯರು ಯಾರು ಎಂಬ ಬಗ್ಗೆ ಚರ್ಚೆ ಚರ್ಚೆ ನಡೆಯಿತು.
ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.ಸಭೆಯಲ್ಲಿ ಮಾತನಾಡಲು ಅವಕಾಶ ನೀಡಬೇಕು, ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಆಗ್ರಹಿಸಿದರು. ಸುಳ್ಯದಲ್ಲಿ ನಡೆದ ಬ್ಯಾನರ್ ಪ್ರಕರಣವನ್ನು ಭೇಧಿಸಬೇಕು. ಸತ್ಯ ಹೊರ ಬರಬೇಕು ಎಂದು ಕಾರ್ಯಕರ್ತರು ಒತ್ತಾಯ ಮಾಡಿದರು. ತಾಲೂಕಿನ ಕೆಲವು ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆಯೂ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.
ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಆಗಮಿಸಿ ಸಭೆಯಲ್ಲಿ ಮಾರ್ಗದರ್ಶನ ನೀಡಿದರು.
ಸುಳ್ಯ ಉಸ್ತುವಾರಿ ದುರ್ಗಾಪ್ರಸಾದ್ ರೈ ಕುಂಬ್ರ, ಕೆ. ಭಾಸ್ಕರ ಕೋಡಿಂಬಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಸದಸ್ಯರಾದ ಭರತ್ ಮುಂಡೋಡಿ, ಸರಸ್ವತಿ ಕಾಮತ್, ಜಿಲ್ಲಾ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಪ್ರಮುಖರಾದ ಎಂ.ವೆಂಕಪ್ಪ ಗೌಡ, ರಾಜೀವಿ ಆರ್ ರೈ, ಎಸ್.ಸಂಶುದ್ದೀನ್, ರಾಜಾರಾಮ್ ಭಟ್ ಬೆಟ್ಟ, ಸುಜಯ ಕೃಷ್ಣ,ರಾಧಾಕೃಷ್ಣ ಪರಿವಾರಕಾನ, ಪ್ರವೀಣ ಮರುವಂಜ, ಧರ್ಮಪಾಲ ಕೊಯಿಂಗಾಜೆ, ಸತ್ಯಕುಮಾರ್ ಆಡಿಂಜ, ಯೂಸುಫ್ ಅಂಜಿಕ್ಕಾರ್, ನಂದರಾಜ್ ಸಂಕೇಶ, ಸಿದ್ದಿಕ್ ಕೊಕ್ಕೊ, ಶರೀಫ್ ಕಂಠಿ, ರಿಯಾಝ್ ಕಟ್ಟೆಕಾರ್, ಶಾಫಿ ಕುತ್ತಮೊಟ್ಟೆ, ಕೆ.ಎಂ.ಮುಸ್ತಫಾ, ಅಶೋಕ್ ಚುಂತಾರು, ಜೆ.ಕೆ.ಹಮೀದ್ ಗೂನಡ್ಕ, ಎಸ್.ಕೆ.ಹನೀಫ, ಲೀಲಾ ಮನಮೋಹನ, ಶಹೀದ್ ಪಾರೆ ಸುರೇಶ್ ಅಮೈ, ಮತ್ತಿತರರು ಉಪಸ್ಥಿತರಿದ್ದರು.









