ಸುಳ್ಯ: ಗ್ರಾಮ ಪಂಚಾಯತ್ ಅಧ್ಯಕ್ಷರ ಹಾಗು ಸದಸ್ಯರ ಹಕ್ಕು ಮೊಟಕುಗೊಳಿಸಿ ವಿಕೇಂದ್ರೀಕರಣ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಕೇಂದ್ರೀಕರಣಗೊಳಿಸಲಾಗುತಿದೆ ಎಂದು ಆರೋಪಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ಸುಳ್ಯ ತಾಲೂಕು ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ

ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಬಿಜೆಪಿ ಸರಕಾರ ಜನ ವಿರೋಧಿ ಆಡಳಿವನ್ನು ನಡೆಸುತಿದೆ. ರಾಜ್ಯ ಹಾಗು ಕೇಂದ್ರ ಸರಕಾರದ ಆಡಳಿತದಿಂದ ಜನ ಸಾಮಾನ್ಯರು ರೋಸಿ ಹೋಗಿದ್ದಾರೆ.ಇದೀಗ ಗ್ರಾಮ ಪಂಚಾಯತ್ ಪ್ರತಿನಿಧಿಗಳ ಹಕ್ಕನ್ನು ಕಡಿತ ಮಾಡುವ ಮೂಲಕ ಗ್ರಾಮ ಪಂಚಾಯತ್ ರಾಜ್ ವ್ಯವಸ್ಥೆಗೆ ಕೊಡಲಿ ಏಟು ನೀಡಲು ಸರಕಾರ ಮುಂದಾಗಿದೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಮಾತನಾಡಿ ಮೊಟಕುಗೊಳಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗು ಸದಸ್ಯರ ಹಕ್ಕನ್ನು ಕೂಡಲೇ ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.ಕೆಪಿಸಿಸಿ ವಕ್ತಾರ ಭರತ್ ಮುಂಡೋಡಿ, ಕೆಪಿಸಿಸಿ ಸಂಯೋಜಕ ಜಿ.ಕೃಷ್ಣಪ್ಪ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಶುಭಾಶ್ಚಂದ್ರ ಶೆಟ್ಟಿ ಕೊಳ್ನಾಡ್, ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಟಿ.ಎಂ.ಶಹೀದ್ ತೆಕ್ಕಿಲ್, ಎಂ.ವೆಂಕಪ್ಪ ಗೌಡ,

ಡಾ.ಬಿ.ರಘು, ಸರಸ್ವತಿ ಕಾಮತ್, ಎಸ್.ಸಂಶುದ್ದೀನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್,ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ತಾಲೂಕು ಅಧ್ಯಕ್ಷ ಜಯಪ್ರಕಾಶ್ ನೆಕ್ರಪ್ಪಾಡಿ, ಪ್ರಮುಖರಾದ ಪಿ.ಎಸ್.ಗಂಗಾಧರ, ಸೋಮಶೇಖರ ಕೊಯಿಂಗಾಜೆ, ಲೀಲಾ ಮನಮೋಹನ, ಜಗನ್ನಾಥ ಪೂಜಾರಿ ಮುಕ್ಕೂರು, ಭವಾನಿಶಂಕರ ಕಲ್ಮಡ್ಕ ಸಚಿನ್ ರಾಜ್ ಶೆಟ್ಟಿ, ಪಿ.ಕೆ.ಅಬೂಸಾಲಿ, ಜಿ.ಕೆ.ಹಮೀದ್, ರಹೀಂ ಬೀಜದಕಟ್ಟೆ, ಶೌವಾದ್ ಗೂನಡ್ಕ, ವಿಜಯ ಆಲಡ್ಕ, ಅನುಸೂಯ, ಧರ್ಮಪಾಲ ಕೊಯಿಂಗಾಜೆ,ಕೆ.ಎಂ.ಮುಸ್ತಫ, ಶರೀಫ್ ಕಂಠಿ, ಶಾಫಿ ಕುತ್ತಮೊಟ್ಟೆ, ಕೀರ್ತನ್ ಕೊಡಪಾಲ,ಎಸ್.ಕೆ.ಹನೀಫ, ಚಿತ್ರಾಕುಮಾರಿ, ಲಕ್ಷ್ಮಣ್ ಬೊಳ್ಳಾಜೆ, ದಿನೇಶ್ ಸರಸ್ವತಿ ಮಹಲ್, ವಿಮಲಾ ಪ್ರಸಾದ್, ಅನುಪಮ, ಸುಂದರಿ ಮುಂಡಡ್ಕ, ಸುಶೀಲಾ, ಉಷಾ ಜಯರಾಮ, ಲಿಸ್ಸಿ ಮೊನಾಲಿಸಾ, ರಾಧಾಕೃಷ್ಣ ಪರಿವಾರಕಾನ,ಡೇವಿಡ್ ಧೀರಾ ಕ್ರಾಸ್ತಾ, ಅಬ್ದುಲ್ ಗಫೂರ್ ಕಲ್ಮಡ್ಕ, ಹಾಜಿರಾ ಅಬ್ದುಲ್ ಗಫೂರ್, ನಂದರಾಜ ಸಂಕೇಶ, ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ, ಸದಾನಂದ ಮಾವಜಿ, ಪರಮೇಶ್ವರ ಕೆಂಬಾರೆ, ಲೋಕೇಶ್ ಅಕ್ರಿಕಟ್ಟೆ, ಪವಿತ್ರ ಕುದ್ವ, ಜಯಲತಾ, ಶಹನಾಝ್, ಚಂದ್ರಾವತಿ,

ಗುಲಾಬಿ,ಮಣಿಕಂಠ, ಶ್ರೀಹರಿ ಕುಕ್ಕುಡೇಲು, ಶಶಿಧರ ಎಂ.ಜೆ, ಮೀನಾಕ್ಷಿ ಆಲೆಟ್ಟಿ, ತಿರುಮಲೇಶ್ವರಿ ಅಡ್ಕಾರ್, ವಿಜೇಶ್ ಹಿರಿಯಡ್ಕ, ರಾಹುಲ್ ಅಡ್ಪಂಗಾಯ, ಅನಿಲ್ ಬಳ್ಳಡ್ಕ, ದಿನೇಶ್ ಅಂಬೆಕಲ್ಲು, ಸುಧೀರ್ ರೈ ಮೇನಾಲ, ಕರುಣಾಕರ ಆಳ್ವ, ಮೂಸಾ ಕುಂಞಿ ಪೈಂಬೆಚ್ಚಾಲು, ಚಂದ್ರಕಾಂತ ನಾರ್ಕೋಡು, ಉಬೈಸ್ ಗೂನಡ್ಕ, ಅಬ್ದುಲ್ಲಾ ಅಜ್ಜಾವರ, ಗಂಗಾಧರ ಮೇನಾಲ ಮತ್ತಿತರರು ಉಪಸ್ಥಿತರಿದ್ದರು.
ಮೊಟಕುಗೊಳಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗು ಸದಸ್ಯರ ಹಕ್ಕನ್ನು ಕೂಡಲೇ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ತಾಲೂಕು ಅಧ್ಯಕ್ಷ ಜಯಪ್ರಕಾಶ್ ನೆಕ್ರಪ್ಪಾಡಿ ಸ್ವಾಗತಿಸಿ, ಲೀಲಾ ಮನಮೋಹನ ವಂದಿಸಿದರು.ಸಚಿನ್‌ರಾಜ್ ಶೆಟ್ಟಿ ನಿರೂಪಿಸಿದರು.