ಸುಳ್ಯ: ಸುಳ್ಯ ನಗರ ಪಂಚಾಯತ್ನ ಘನತ್ಯಾಜ್ಯ ವಿಲೇವಾರಿ ಅವ್ಯವಸ್ಥೆ ಹಾಗೂ ಅಮೃತ್ 2 ಯೋಜನೆಯಲ್ಲಿ ಅಗೆದ ರಸ್ತೆಗಳ ದುರಸ್ತಿ ಸೇರಿದಂತೆ ನಗರದ ಸಮಸ್ಯೆಗಳನ್ನು ಮುಂದಿರಿಸಿ ನಗರ ಕಾಂಗ್ರೆಸ್ ವತಿಯಿಂದ ನಗರ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ,ಜಿಲ್ಲಾ ಕಾರ್ಯದರ್ಶಿ ರಾಧಕೃಷ್ಣ ಬೊಳ್ಳುರು,ಸುಳ್ಯ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್ ಗಂಗಾಧರ,ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ,ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ ಮುಸ್ತಫ , ಕೆ ಗೋಕುಲ್ ದಾಸ್ ,ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ,ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಮಾತನಾಡಿ ಹಿಂದಿನ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಹಿಂದಿನ

ಆಡಳಿತ ಮಂಡಳಿಯ ವೈಫಲ್ಯದಿಂದ ಸುಳ್ಯ ನಗರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜಮೀನು ಖರಿದೀಸಿ ಇಲ್ಲವೇ ಸುಸಜ್ಜಿತ ಘನತ್ಯಾಜ್ಯ ವಿಲೇವಾರಿ ಘಟಕ ಜೊತೆಗೆ ಕಲ್ಚರ್ಪೆ ಬರ್ನಿಂಗ್ ಕೇಂದ್ರವದಲ್ಲಿ ಬರ್ನಿಂಗ್ ಮಾಡಬೇಕು ಎಂದು ಆಗ್ರಹಿಸಿದರು.ಅಮೃತ್ 2 ಯೋಜನೆಯಲ್ಲಿ ಅಗೆದ ರಸ್ತೆ ಮತ್ತು ಇಂಟಲಾಕ್ಗಳನ್ನು ತಕ್ಷಣವೇ ಸರಿ ಪಡಿಸಿ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ಸಹಕಾರಿಯಾಗಬೇಕು. ಜ.31ರ ಒಳಗಾಗಿ ಸುಳ್ಯ ನಗರದಲ್ಲಿ ಅಮೃತ್ ಯೋಜನೆಗೆ ಅಗೆದ ರಸ್ತೆಗಳನ್ನು ಸರಿ ಪಡಿಸಬೇಕು, ತ್ಯಾಜ್ಯಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಪ್ರತೇಕ ಸ್ಥಳವನ್ನು ಕಾಯ್ದಿರಿಸಿ ಸಮರ್ಪಕ ವ್ಯವಸ್ಥೆಯನ್ನು ಮಾಡಬೇಕು ಎಂದು ಆಗ್ರಹಿಸಿ ಮುಖ್ಯಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂಜೆ
ನಗರ ಪಂಚಾಯತ್ ಪಂಚಾಯತ್ ಮಾಜಿ ಸದಸ್ಯರಾದ ಶರೀಫ್ ಕಂಠಿ, ಬಾಲಕೃಷ್ಣ ಭಟ್ ಕೊಡೆಂಕೇರಿ,ಡೇವಿಡ್ ಧೀರ ಕ್ರಾಸ್ತಾ,ರಾಜು ಪಂಡಿತ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ,ಪ್ರಮುಖರಾದ ಶಾಫಿ ಕುತ್ತಮೊಟ್ಟೆ, ಭವಾನಿಶಂಕರ್ ಕಲ್ಮಡ್ಕ, ಪ್ರೇಮಾ ಟೀಚರ್, ಸುಜಯ ಕೃಷ್ಣ, ರಾಧಾಕೃಷ್ಣ ಪರಿವಾರಕಾನ,ಮಹೇಶ್ ಬೆಳ್ಳಾರ್ಕರ್,ನಂದರಾಜ್ ಸಂಕೇಶ, ಮಂಜುನಾಥ್ ಮಡ್ತಿಲ, ಮತ್ತಿತರರು ಉಪಸ್ಥಿತರಿದ್ದರು.












