ಸುಳ್ಯ:ಶಾಲಾ ಮೈದಾನದಲ್ಲಿ ಶೈಕ್ಷಣಿಕ ಚಟುವಟಿಕೆ ಹೊರತುಪಡಿಸಿ ಇತರ ಖಾಸಗೀ ಕಾರ್ಯಕ್ರಮ ನಡೆಸಲು ನಿಷೇಧ ಮಾಡಿ ಕಾನೂನು ಜಾರಿಗೆ ತಂದಿರುವುದು 2013ರಲ್ಲಿ ಬಿಜೆಪಿ ಸರಕಾರ. ಇದೀಗ ಬಿಜೆಪಿ ಯುವ ಮೋರ್ಚಾದ ನೇತೃತ್ವದಲ್ಲಿ ಮಾಹಿತಿ ಇಲ್ಲದೆ ಸುಳ್ಯದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಯವರು ತಾಲೂಕು ಕಚೇರಿ ಎದುರಿನಲ್ಲಿ ಪ್ರತಿಭಟನೆ ಮಾಡುವ ಬದಲು ಬಿಜೆಪಿ ಶಾಸಕರುಗಳ ಮನೆ ಮುಂದೆ
ಪ್ರತಿಭಟನೆ ನಡೆಸಲಿ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಯುವ ಮೋರ್ಚಾದವರು ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಿ ಭಜನಾ ಕಮ್ಮಟ ಮಾಡಿರುವುದು ಖಂಡನೀಯ ಎಂದರು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತಾಗಿದೆ ಬಿಜೆಪಿಯ ಕಥೆ. ಅನಾವಶ್ಯಕವಾಗಿ ಸರಕಾರವನ್ನು ಬೈಯ್ಯಲು ಒಂದು ಕಾರಣ ಹುಡುಕುತ್ತಾರೆ.
ತಾಲೂಕು ಕಚೇರಿ ಮುಂದೆ ಅಲ್ಲಾ ಜಗದೀಶ್ ಶೆಟ್ಟರ್ ಅವರ ಮನೆ ಮುಂದೆ ಮಾಡಬೇಕಿತ್ತು. ಬಿಜೆಪಿಗರಿಗೆ ಜ್ಞಾನದ ಕೊರತೆಯಿಂದ ಕಾಂಗ್ರೆಸ್ ಸರಾಕರದ ಮೇಲೆ ಗೂಬೆ ಕೂರಿಸುತಿದೆ ಎಂದು ಹೇಳಿದರು. ಗಣೇಶೋತ್ಸವ, ಕೃಷ್ಣಾಷ್ಟಮಿ ಸೇರಿದಂತೆ ಧಾರ್ಮಿಕ ಚಟುವಟಿಕೆಗಳಿಗೆ
ಯಾವುದೇ ಸಮಸ್ಯೆ ಬರುವುದಿಲ್ಲ. ಇಲ್ಲಿ ಸೌಹಾರ್ದಯುತವಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಜೆಟ್ನಲ್ಲಿ ಕರ್ನಾಟಕ್ಕೆ ಶೂನ್ಯ ಎಂದ ಅವರು ಕರ್ನಾಟಕದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸಿದ್ದಾರೆ ಎಂದರು.
9/11 ಸಮಸ್ಯೆಗಳ ಬಗ್ಗೆ ಪುತ್ತೂರು ಶಾಸಕರು ನಡೆಸಿದ ಅಶೋಕ್ ರೈ ಅವರನ್ನು ಬ್ಲಾಕ್ ಕಾಂಗ್ರೆಸ್ ಸುಳ್ಯ ಅಭಿನಂದಿಸುತ್ತದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ ಮಾತನಾಡಿ 2013ರಲ್ಲಿ ಆದೇಶ ಹೊರಡಿಸುವ ಸಂದರ್ಭದಲ್ಲಿ ಶಾಸಕರು ಪ್ರಶ್ನಿಸಬೇಕಿತ್ತು. ಆದರೆ ಈಗ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದರು. ಬಿಜೆಪಿಯದ್ದು ದ್ವಂದ್ವ ನೀತಿ ಎಂದ ಅವರು
ಸರಕಾರದ ಅನುದಾನ ಬಂದರೆ ಪಕ್ಷದ ಕಾರ್ಯಕ್ರಮದ ಹಾಗೆ ಮಾಡುತ್ತಾರೆ.ಜನಪ್ರತಿನಿಧಿಗಳು ಯಾವುದೇ ಪಕ್ಷದ ಪ್ರತಿನಿಧಿಗಳು ಅಲ್ಲಾ ಅವರು ಜನರ ಪ್ರತಿನಿಧಿಗಳು ಎಂದರು. ಈ ಭಾಗದಲ್ಲಿ ಸೌಹಾರ್ದತೆಯಲ್ಲಿ ಹಬ್ಬ ಆಚರಣೆ ಮಾಡುವುದಕ್ಕೆ ಏನೂ ಸಮಸ್ಯೆ ಇಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸುರೇಶ್ ಎಂ.ಎಚ್, ಶಶಿಧರ ಎಂ.ಜೆ. ನಂದರಾಜ ಸಂಕೇಶ, ಚಂದ್ರಲಿಂಗಂ ಉಪಸ್ಥಿತರಿದ್ದರು.