ಮೂಲ್ಕಿ:ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ನೆರೇಗಾ ಬಚಾವೋ ಸಂಗ್ರಾಮ್ ಪ್ರಯುಕ್ತ ನಡೆದ ಪಾದಯಾತ್ರೆ ಗುರುವಾರ ಸಂಜೆ ಮೂಲ್ಕಿಯಲ್ಲಿ ಸಮಾಪನಗೊಂಡಿತು.ಫೆ.9ರಂದು ಸುಳ್ಯದಿಂದ ಆರಂಭಗೊಂಡ ಪಾದಯಾತ್ರೆ
4 ದಿನ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 120 ಕಿ.ಮಿ.ಪ್ರಯಾಣಿಸಿ ಮೂಲ್ಕಿಯಲ್ಲಿ ಸಮಾಪನಗೊಂಡಿತು.ಗುರುವಾರ ಮಂಗಳೂರು ಮಹಾನಗರಪಾಲಿಕೆ ಎದುರು ಇರುವ ಮಹಾತ್ಮಾ ಗಾಂಧೀಜಿ ಪ್ರತಿಮೆ ಬಳಿಯಿಂದ ಪ್ರಾರಂಭವಾಗಿ ಮೂಲ್ಕಿ ತನಕ ಪಾದಯಾತ್ರೆ ಸಾಗಿತು. ಸಾವಿರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.ಕಾಂಗ್ರೆಸ್ ಮುಖಂಡ ಉಗ್ರಪ್ಪ ಅವರು ಸಮಾರೋಪ ಭಾಷಣ ಮಾಡಿದರು.ಡಿಸಿಸಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಸುಳ್ಯದಿಂದ ಪ್ರಮುಖರು ಸೇರಿ ನೂರಾರು ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.







