ಸುಳ್ಯ: ಸುಳ್ಯ ಬ್ಲಾಕ್ ಕಾಂಗ್ರೇಸ್ ವತಿಯಿಂದ ಅಧ್ಯಕ್ಷರಾದ ಪಿ.ಸಿ ಜಯರಾಮ್ ನೇತೃತ್ವದಲ್ಲಿ ಸುಳ್ಯ ನಿರೀಕ್ಷಣ ಮಂದಿರದಲ್ಲಿ ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರನ್ನು ಭೇಟಿಯಾಗಿ ಸುಳ್ಯದ ವಿವಿಧ ಸಮಸ್ಯೆಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು. ಪ್ರಮುಖವಾಗಿ ಸಂಪಾಜೆಯ ಹೊಳೆಯಿಂದ ಹೂಳೆತ್ತುವ
ಕಾರ್ಯದ ಬಗ್ಗೆ ಚರ್ಚಿಸಿ ಮುಂದಿನ ಮಳೆಗಾಲದಲ್ಲಿ ಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು. ಶಕ್ತಿ ಕಾರ್ಯಕ್ರಮ, ಅಕ್ರಮ ಸಕ್ರಮ ಯೋಜನೆ ,ಉಬರಡ್ಕ ಗ್ರಾಮದ ಅಮೇ ಮಡಿಯಾರುನಲ್ಲಿ ಸ್ವಾತಂತ್ರ್ಯ ಹೋರಾಟಗಾರ ರಾಮಯ್ಯ ಗೌಡರ ಸ್ಮಾರಕ, ಸುಳ್ಯ ನಗರದಲ್ಲಿ ಪ್ರತಿಮೆ ಸ್ಥಾಪನೆ,ಬೆಳ್ಳಾರೆಯಲ್ಲಿರುವ ಚಾರಿತ್ರಿಕ ಖಜಾನೆ ಮತ್ತು ಕೋಟೆಯನ್ನು ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಪಡಿಸುವ ಬಗ್ಗೆ, ಸುಳ್ಯ ನಗರದಿಂದ ಗೌಡ ಸಮುದಾಯ ಭವನದ ವರೆಗೆ ತುರ್ತು ರಸ್ತೆ ಕಾಮಗಾರಿ ಬಗ್ಗೆ, ತಾಲ್ಲೂಕು ಕ್ರೀಡಾಂಗಣದ ಸಮಸ್ಯೆ, ಸುಳ್ಯ ತಾಲೂಕಿನ ಕಂದಾಯ ಇಲಾಖೆಯ ಹಲವು ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಯವರಲ್ಲಿ ಚರ್ಚಿಸಿ ಹಲವು ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು.ನಿಯೋಗದಲ್ಲಿ ಕೆಪಿಸಿಸಿ ವಕ್ತಾರ ಟಿ ಎಮ್ ಶಹೀದ್ ತೆಕ್ಕಿಲ್, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಬ್ಲಾಕ್ ಪ್ರ. ಕಾರ್ಯದರ್ಶಿ ಪಿ.ಎಸ್ ಗಂಗಾಧರ್, ಕಿಸಾನ್ ಘಟಕದ ಅಧ್ಯಕ್ಷ ಸುರೇಶ್ ಅಮೈ,
ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ದೀಕ್ ಕೊಕ್ಕೋ ಮತ್ತು ಎನ್ ಎಸ್ ಯು ಐ ಅಧ್ಯಕ್ಷ ಕೀರ್ತನ್ ಕೊಡೆಪಾಲ ಇದ್ದರು.