ಸುಳ್ಯ: ಅಮಾನತು ಮತ್ತು ಶೋಕಾಸ್ ನೋಟೀಸ್ ಪಡೆದ ಸುಳ್ಯ ಮತ್ತು ಕಡಬದ ಕಾಂಗ್ರೆಸ್ ನಾಯಕರು ಕೆಪಿಸಿಸಿ ಅಧ್ಯಕ್ಷ ಡಿ. ಕೆ . ಶಿವಕುಮಾರ್ ಮತ್ತು ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸುಳ್ಯ ಕ್ಷೇತ್ರದ ಸ್ಥಿತಿಯ
ಕುರಿತು ಕೆಪಿಸಿಸಿ ಶಿಸ್ತು ಸಮಿತಿ ರೆಹಮಾನ್ ಖಾನ್ ಅವರ ಬಳಿ ಇವರು ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಹೆಚ್.ಎಂ ನಂದಕುಮಾರ್, ಮಾಜಿ ಕೆಪಿಸಿಸಿ ಸದಸ್ಯ ಡಾ. ರಘು, ಮುಖಂಡರುಗಳಾದ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು,ಕೆ ಗೋಕುಲ್ದಾಸ್, ಸಚಿನ್ ರಾಜ್ ಶೆಟ್ಟಿ ಪೆರುವಾಜೆ,ಉಷಾ ಅಂಚನ್, ಆಶಾ ಲಕ್ಷ್ಮಣ್, ಭವಾನಿಶಂಕರ್ ಕಲ್ಮಡ್ಕ, ಶಶಿಧರ್ ಎಂ ಜೆ, ಚೇತನ್ ಕಜೆಗದ್ದೆ, ಸುಧೀರ್ ದೇವಾಡಿಗ, ಫೈಜಲ್ ಕಡಬ, ಶಹೀದ್ ಪಾರೆ ಮೊದಲಾದವರು ಉಪಸ್ಥಿತರಿದ್ದರು.