ಸುಳ್ಯ: ರಾಜ್ಯ ಆರೋಗ್ಯ ಸಚಿವರು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರನ್ನು ಸುಳ್ಯ ಕಾಂಗ್ರೆಸ್ ಮುಖಂಡರು ಭೇಟಿ ಮಾಡಿದರು. ಸುಳ್ಯ ಮತ್ತು ಕಡಬ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವಂತೆ ಮತ್ತು ಖಾಲಿ ಇರುವ ಹುದ್ದೆಗಳ
ಭರ್ತಿ ಮಾಡುವಂತೆ , ಸುಳ್ಯಕ್ಕೆ ಹೆಚ್ಚುವರಿ ಡಯಲಾಲಿಸ್ ವ್ಯವಸ್ಥೆ ಮಾಡಲು ಮನವಿ ಮಾಡಿದರು. ಇದರ ಬಗ್ಗೆ ಸೂಕ್ತ ಪರಿಶೀಲನೆ ಮಾಡಿ ಪರಿಹಾರ ಒದಗಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಡಾ.ಬಿ.ರಘು, ಹೆಚ್.ಎಂ. ನಂದಕುಮಾರ್, ಸಚಿನ್ ರಾಜ್ ಶೆಟ್ಟಿ, ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಕೆ.ಗೋಕುಲ್ ದಾಸ್, ಭವಾನಿ ಶಂಕರ ಕಲ್ಮಡ್ಕ, ಉಷಾ ಅಂಚನ್, ಚೇತನ್ ಕಜೆಗದ್ದೆ, ಆಶಾಲಕ್ಷ್ಣಣ, ಫೈಸಲ್, ಶಶಿಧರ ಎಂ ಜೆ, ಶಹೀದ್ ಪಾರೆ, ಸುದೀರ್ ದೇವಾಡಿಗ ಮೊದಲಾದವರು ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿದ್ದರು.