ಅಜ್ಜಾವರ:ಸಿದ್ದರಾಮಯ್ಯರವರ ಕಳೆದ ಅವಧಿಯ ಸರಕಾರ 160 ಆಶ್ವಾಸನೆ ಗಲ್ಲಿ 158 ಈಡೇರಿಸಿದೆ. ಪ್ರತಿಯೊಬ್ಬ ನಾಯಕ ಮತ್ತು ಕಾರ್ಯಕರ್ತ ಮನೆ ಮನೆಗೆ ಭೇಟಿ ನೀಡಿ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಮನೆಯ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು ರೂ.2000, ಅನ್ನಭಾಗ್ಯ ಉಚಿತ10 ಕೆಜಿ ಅಕ್ಕಿ ಮೊದಲಾದ ಯೋಜನೆಯ ಗ್ಯಾರಂಟಿ ಕಾರ್ಡ್ ಹಂಚಿ ವಿಶ್ವಾಸರ್ಹತೆ ಪಡೆದು ಕಾಂಗ್ರೆಸ್ನ್ನು ಮುಂದಿನ
ಚುನಾವಣೆ ಯಲ್ಲಿ ಅಧಿಕಾರಕ್ಕೆ ತನ್ನಿ ಎಂದು ಕೆಪಿಸಿಸಿ ಪ್ರಾಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಕರೆ ನೀಡಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಜ್ಜಾವರ ವಲಯ ಸಮಿತಿ ವತಿಯಿಂದ ಆಯೋಜಿಸಲಾದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಿಡುಗಡೆ ಗೊಳಿಸಿ ಮಾತನಾಡಿದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ್ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪಗೌಡ, ಯುವ ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕ ಸುಳ್ಯ ಕ್ಷೇತ್ರ ಉಸ್ತುವಾರಿ ಕಮಲ್ಜಿತ್ ಕಣ್ಣೂರ್,ಕೆಪಿಸಿಸಿ ಸಂಯೋಜಕರಾದ ಎಚ್. ಎಂ.ನಂದಕುಮಾರ್, ಜಿ.ಕೃಷ್ಣಪ್ಪ, ಕೆಪಿಸಿಸಿ ಮಾಜಿ ಸದಸ್ಯ ಡಾ.ರಘು, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ.ಮುಸ್ತಫ, ಕೆ.ಗೋಕುಲದಾಸ್,
ಯುವ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಮಹಿಳಾ ಘಟಕ ಅಧ್ಯಕ್ಷೆ ಗೀತಾ ಕೊಲ್ಚಾ,ರ್ ಮತ್ತು ಎನ್ ಎಸ್ ಯು ಐ ಅಧ್ಯಕ್ಷ ಕೀರ್ತನ್ ಕೊಡೆಪಾಲ,ಇಂಟಕ್ ಅಧ್ಯಕ್ಷ ಶಾಫಿ ಕುತ್ತಾಮೊಟ್ಟೆ, ಮಾಜಿ ಜಿ. ಪಂ. ಸದಸ್ಯೆ ರಾಜೀವಿ ರ್ ರೈ ಬೆಳ್ಳಾರೆ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ, ಹಸೈನಾರ್ ಹಾಜಿ ಗೋರಡ್ಕ, ಮಾಜಿ ತಾ. ಪo. ಸದಸ್ಯ ತೀರ್ಥರಾಮ ಜಾಲ್ಸೂರು, ಕೆ ಸುಳ್ಯ, ಸುಜಯಕೃಷ್ಣ, ಅಜ್ಜಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲೀಲಾ ಮನಮೋಹನ, ಮಾಜಿ ಅಧ್ಯಕ್ಷ ಪ್ರಸಾದ ರೈ, ಸದಸ್ಯರಾದ ರಾಹುಲ್ ಅಡ್ಪಂಗಾಯ, ಜಯರಾಮ್, ದೇವಕಿ, ಗೀತಾ, ವಿಶ್ವನಾಥ್ ಅಜ್ಜಾವರ, ಶ್ವೇತಾ ಶಿರ್ವಾಜೆ,ಬೇಬಿ ಕಲ್ತಡ್ಕ, ಅಬ್ದುಲ್ಲ ಅಜ್ಜಾವರ, ಮಾಜಿ ತಾ. ಪo. ಸದಸ್ಯೆ ಅನಸೂಯ, ಕಾಂಗ್ರೆಸ್ ಧುರೀಣರುಗಳಾದ ರಂಜಿತ್ ಮೇನಾಲ, ಮಂಡೆಕೋಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸದಾನಂದ ಮಾವಜಿ,
ಯುವ ಕಾಂಗ್ರೆಸ್ ಮಾಜಿ ಬೂತ್ ಅಧ್ಯಕ್ಷ ಖಾದರ್, ಮೊದಲಾದವರು ಉಪಸ್ಥಿತರಿದ್ದರು
ಶ್ರೀಧರ್ ಮೇನಾಲ, ಗಂಗಾಧರ್ ಮೇನಾಲ ಕಾರ್ಯಕ್ರಮ ನಿರೂಪಿಸಿದರು.