ಸುಳ್ಯ: ಸುಳ್ಯ ನಗರ ಕೆರೆಮೂಲೆ ವಾರ್ಡನಲ್ಲಿ ಮನೆ ಮನೆಗಡ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣಾ ಕಾರ್ಯಕ್ರಮ ನಡೆಯಿತು. 200 ಯುನಿಟ್ ಉಚಿತ ವಿದ್ಯುತ್, ಮನೆ ಯಜಮಾನಿಗೆ ಪ್ರತೀ ತಿಂಗಳು
ರೂ 2000 ಪ್ರೋತ್ಸಾಹ ಧನ, ಮತ್ತು 10 ಕೆಜಿ ಪ್ರತೀ ತಿಂಗಳು ಉಚಿತ ಅಕ್ಕಿ ನೀಡುವ ಯೋಜನೆಯ ಕೆಪಿಸಿಸಿ ಕಾರ್ಡ್ ನ್ನು ನಗರ ಪಂಚಾಯತ್ ಸದಸ್ಯ ಎಂ. ವೆಂಕಪ್ಪಗೌಡ ನೇತೃತ್ವ ದಲ್ಲಿ ವಿತರಿಸಲಾಯಿತು. ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಕಾಂಗ್ರೆಸ್ ಮುಖಂಡರಾದ ಕೆ.ಗೋಕುಲದಾಸ್, ರಾಜು ಪಂಡಿತ್, ಶಹೀದ್ ಪಾರೆ, ನೌಷಾದ್ ಬಾರ್ಪಣೆ ಮೊದಲಾದವರು ಉಪಸ್ಥಿತರಿದ್ದರು