ಸುಳ್ಯ:ಜಮೀನಿನ ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ಸಂಪಾಜೆಯ ಕಾಂಗ್ರೆಸ್ ಮುಖಂಡರ ನಿಯೋಗ ದ.ಕ. ಜಿಲ್ಲಾಧಿಕಾರಿ ಮತ್ತು ಡಿ.ಡಿ.ಎಲ್ ಆರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು. ಅರಣ್ಯ ಮತ್ತು ಕಂದಾಯ ಭೂಮಿಗಳ
ಗಡಿಗುರುತು ಮಾಡುವುದು, ಜಮೀನು ದಾಖಲೆಗಳಿಗೆ ಸಂಭಂಧಿಸಿ ಪ್ಲಾಟಿಂಗ್, ಕನ್ವರ್ಷನ್, 9/11, 94ಸಿ, 94ಸಿಸಿ ಸಮಸ್ಯೆಗಳು ಇದೆ. ಇದರಿಂದ ಮನೆ, ಕಟ್ಟಡ ನಿರ್ಮಾಣಕ್ಕೆ, ವಿದ್ಯುತ್ ಸಂಪರ್ಕಕ್ಕೆ ಸಮಸ್ಯೆಯಾಗಿದೆ, ರೈತರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ವಿನಂತಿಸಲಾಯಿತು.
ನಿಯೋಗದಲ್ಲಿ ಕೆ.ಪಿ.ಸಿ.ಸಿ.ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಕೆ.ಪಿ.ಜಾನಿ , ಮುಖಂಡರಾದ ಮಹಮ್ಮದ್ ಕುಂಞಿ ಗೂನಡ್ಕ , ಎ.ಕೆ.ಇಬ್ರಾಹಿಂ ರಾಜು ನೆಲ್ಲಿಕುಮೇರಿ , ವಸಂತ ಪೆಲ್ತಡ್ಕ ಇದ್ದರು.





