ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. 37 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಕೆಪಿಸಿಸಿ ಮಾಜಿ ಅಧ್ಯಕ್ಷ ಕಣ್ಣೂರಿನ ಹಾಲಿ ಎಂಪಿ ಕೆ.ಸುಧಾಕರನ್ ಅವರು
ವಿಧಾನ ಸಭೆಗೆ ಸ್ಪರ್ಧಿಸಲು ಒಲವು ತೋರಿದ್ದರೂ ಟಿಕೆಟ್ ನೀಡಿಲ್ಲ. ಟಿ.ಒ.ಮೋಹನ್ ಅವರು ಕಣ್ಣೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ತೊರೆದು ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಸಂದೀಪ್ ವಾರಿಯರ್ ಅವರಿಗೆ ಕಾಸರಗೋಡು ಜಿಲ್ಲೆಯ ತ್ರಿಕ್ಕರಿಪುರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಉದುಮ ಕ್ಷೇತ್ರದಿಂದ ಕೆ.ನೀಲಕಂಠನ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ನೇಮಂ ಕ್ಷೇತ್ರಕ್ಕೆ ಕೆ.ಎಸ್.ಶಬರೀನಾಥನ್, ಅರುವಿಕರದಲ್ಲಿ ವಿ.ಎಸ್.ಶಿವಕುಮಾರ್ ಅಭ್ಯರ್ಥಿಯಾಗಿದ್ದಾರೆ.














