ಸುಳ್ಯ: ಬೆಳಗಾವಿ ಯಲ್ಲಿ ರಸ್ತೆ ಅಪಘಾತ ದಲ್ಲಿ ನಿಧನ ಹೊಂದಿದ, ಕಾರ್ಮಿಕ ಮುಖಂಡ, ಹೋರಾಟಗಾರ, ಕಾಂಗ್ರೆಸ್ ಪಕ್ಷದ ಧುರೀಣ ಶಿವಕುಮಾರ್ ಕೌಡಿಚಾರ್ ರವರ ನಿವಾಸಕ್ಕೆ ಸುಳ್ಯ ಕಾಂಗ್ರೆಸ್ ನಾಯಕರು ತೆರಳಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ
ಅಂತಿಮ ನಮನ ಸಲ್ಲಿಸಲಾಯಿತು, ಕಾಂಗ್ರೆಸ್ ಧ್ವಜ ಹೊದಿಸಿ ಗೌರವಾರ್ಪಣೆ ಸಲ್ಲಿಸಿದರು.ಕುಟುಂಬ ವರ್ಗದವರನ್ನು ಭೇಟಿ ಯಾಗಿ ಸಾಂತ್ವನ ತಿಳಿಸಿ, ಶ್ರದ್ದಾoಜಲಿ ಅರ್ಪಿಸಲಾಯಿತು
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ,ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್, ಬ್ಲಾಕ್ ಕಾಂಗ್ರೆಸ್
ಮಾಜಿ ಅಧ್ಯಕ್ಷ ಎಂ. ವೆಂಕಪ್ಪಗೌಡ, ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಕಾರ್ಮಿಕ ಮುಖಂಡ ಚಂದ್ರಲಿಂಗಂ ಮೊದಲಾದವರು ಉಪಸ್ಥಿತರಿದ್ದರು