ಸುಳ್ಯ: ಕ್ರೀಡಾ ಪ್ರತಿಭೆಗಳು ರಾಷ್ಟ್ರದ ಆಸ್ತಿ ಅಗಲುವಿಕೆ
ದೊಡ್ಡ ನಷ್ಟ.ಅಂತಾರಾಷ್ಟ್ರ ಮಟ್ಟದಲ್ಲಿ ಬೆಳಗಿ ದೇಶಕ್ಕೆ ಕೀರ್ತಿ ತರಬೇಕಾದ ಕ್ರೀಡಾ ಜ್ಯೋತಿ ನಂದಿ ಹೋದದ್ದು ದುಃಖಕರ ಎಂದು ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಪ್ರಧಾನ ಕಾರ್ಯದರ್ಶಿ ಯಾಗಿ ಕಾರ್ಯ ನಿರ್ವಹಿಸಿದ ಕೆ. ಎಂ. ಮುಸ್ತಫ ಹೇಳಿದರು
ಇತ್ತೀಚೆಗೆ ಅಕಾಲಿಕವಾಗಿ ಹೃದಯಾಘಾತದಿಂದ ನಿಧನರಾದ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಬೆಳ್ತಂಗಡಿಯ ಸಾಲಿಯತ್ರಿಗೆ ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಲಾದ
ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು
ವಾಲಿಬಾಲ್ ಅಸೋಸಿಯೇಷನ್ನ ಅಧ್ಯಕ್ಷ ದೊಡ್ಡಣ್ಣ ಬರಮೇಲು ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಲಿಯತ್ ಕಳೆದವರ್ಷ ಸುಳ್ಯದಲ್ಲಿ ನಡೆದ ರಾಷ್ಟ್ರೀಯ ವಾಲಿಬಾಲ್ನಲ್ಲಿ ನೀಡಿದ ಪ್ರದರ್ಶನ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು ಎಂದರು.
ದ. ಕ. ಜಿಲ್ಲಾ ವಾಲಿಬಾಲ್ ಉಪಾಧ್ಯಕ್ಷ ಎಸ್. ಸಂಶುದ್ದೀನ್, ತಾಲೂಕು ವಾಲಿಬಾಲ್ ಅಸೋಸಿಯೇಶನ್ ಪದಾಧಿಕಾರಿಗಳಾದ
ಜಯಪ್ರಕಾಶ್ ಕುಡೆಕಲ್ಲು, ಸುದರ್ಶನ್, ಮೂಸ ಕುಂಞಿ ಪೈoಬಚಾಲ್, ರಿಯಾಜ್ ಕಟ್ಟೆಕ್ಕಾರ್ಸ್, ಎಂ. ಜೆ. ಶಶಿಧರ್, ಅಬ್ದುಲ್ ರಜಾಕ್, ರಜ್ಜು ಭಯ್ಯಾ, ಭವಾನಿ ಶಂಕರ್ ಕಲ್ಮಡ್ಕ, ನಿತಿನ್, ಮೊದಲಾದವರು ಉಪಸ್ಥಿತರಿದ್ದರು, ಖಜಾಂಚಿ ಕೆ. ಬಿ. ಇಬ್ರಾಹಿಂ ಸ್ವಾಗತಿಸಿ, ವಂದಿಸಿದರು.
ಉತ್ತರಪ್ರದೇಶದ ಅಲಹಾಬಾದ್ ನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ನೀಡಿದ ಅದ್ಭುತ ಪ್ರದರ್ಶನ ರಾಜ್ಯವನ್ನು ರಾಷ್ಟ್ರದಲ್ಲೇ ಅಗ್ರಸ್ಥಾನಕ್ಕೇರಿಸಿದೆ
ರಾಷ್ಟ್ರೀಯ ವಾಲಿಬಾಲ್ ಬೆಳ್ಳಿ ಪದಕ, ಸೀನಿಯರ್ ನ್ಯಾಷನಲ್ ಚಿನ್ನದ ಪದಕ, ಜೂನಿಯರ್ ನ್ಯಾಷನಲ್ ಸಾಧನೆಗೆ ಧರ್ಮಸ್ಥಳದ ಧರ್ಮಾಧಿಕಾರಿಯವರು ಇವರನ್ನು ಪ್ರಶoಸಿಸಿ ಗೌರವಿಸಿದ್ದರು
ದುಃಖ ತಪ್ತ ಕುಟುಂಬಕ್ಕೆ ಸಾಲಿಯಾತ್ ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂಬ ಪ್ರಾರ್ಥನೆಯೊಂದಿಗೆ ಸಂತಾಪ ನಿರ್ಣಯವನ್ನು ಅಂಗೀಕರಿಸಿ ಕುಟುಂಬ ವರ್ಗಕ್ಕೆ ಕಳುಹಿಸಿ ಕೊಡುವುದೆಂದು ತೀರ್ಮಾನಿಸಲಾಯಿತು.