ಸುಳ್ಯ: ಅಗಲಿದ ಹಿರಿಯ ಪತ್ರಕರ್ತ,ಕಾರ್ಯಕ್ರಮ ನಿರೂಪಕ ಮನೋಹರ್ ಪ್ರಸಾದ್ ಅವರಿಗೆ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆ
ವಹಿಸಿದ್ದರು.ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ಮನೋಹರ ಪ್ರಸಾದರ ಬಗ್ಗೆ ಮಾತನಾಡಿದರು. ಪತ್ರಕರ್ತರಾದ ಜೆ.ಕೆ.ರೈ, ಈಶ್ವರ ವಾರಣಾಶಿ, ಅಧ್ಯಕ್ಷ ದಯಾನಂದ ಕಲ್ನಾರ್ ಶ್ರದ್ಧಾಂಜಲಿ ಅರ್ಪಿಸಿದರು. ಮೃತರ ಗೌರವಾರ್ಥ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಪತ್ರಕರ್ತರು ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಕೋಶಾಧಿಕಾರಿ ರಮೇಶ್ ನೀರಬಿದಿರೆ ವಂದಿಸಿದರು.







