ಸುಳ್ಯ:ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ರಸ್ತೆ ಬದಿಯ ಚರಂಡಿಗೆ ಕಾಂಕ್ರೀಟ್ ಸ್ಲಾಬ್ ಅಳವಡಿಕೆಗೆ 3 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು, ಇದಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಕಾಯರ್ತ್ತೋಡಿ ಮಹಾ ವಿಷ್ಣು ದೇವಸ್ಥಾನದ ಸಮೀಪದ ರಸ್ತೆ ಬದಿ ಚರಂಡಿಯನ್ನು ಎತ್ತರಿಸಿ ಅದರ
ಮೇಲೆ ಕಾಂಕ್ರೀಟ್ ಸ್ಲಾಬ್ ಅಳವಡಿಸಿ ರಸ್ತೆ ಅಗಲೀಕರಣ ಕೆಲಸಕ್ಕೆ ನಗರ ಪಂಚಾಯತ್ ಮಾಜಿ ಸದಸ್ಯ ಎಂ.ವೆಂಕಪ್ಪಗೌಡ ಅವರು 3 ಲಕ್ಷ ಅನುದಾನ ಮೀಸಲಿರಿಸಿದ್ದರು.ನಗರ ಪಂಚಾಯತ್ ಮಾಜಿ ಸದಸ್ಯ ಹಾಗೂ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪಗೌಡ ಅವರು ಗುದ್ದಲಿ ಪೂಜೆ ನೆರವೇರಿಸಿದರು.ಈ ಸಮಯದಲ್ಲಿ ಗುತ್ತಿಗೆದಾರ ಖಾದರ್, ದೇವಸ್ಥಾನದ ವ್ಯವಸ್ಥಾಪಕ ದೇವಿಪ್ರಸಾದ್, ದೀಪಕ್ ಮತ್ತಿತ್ತರರು ಉಪಸ್ಥಿತರಿದ್ದರು.













