ಸುಳ್ಯ: ಭಾರೀ ಮಳೆಗೆ ಸುಳ್ಯ ಗಾಂಧಿನಗರ ಸಮೀಪ ಗುರುಂಪು ಬಳಿಯಲ್ಲಿ ಮನೆಯ ಕಂಪೌಂಡ್ ಒಂದು ಕುಸಿದು ಬಿದ್ದಿದೆ. ಕಂಪೌಂಡ್ ಕುಸಿದು ಕಲ್ಲುಗಳು ಸುಳ್ಯ ಆಲೆಟ್ಟಿ ರಸ್ತೆಗೆ ಬಿದ್ದಿದೆ. ಇದರಿಂದ ವಾಹನ ಸಂಚಾರಕ್ಕೆ
ಕೆಲ ಕಾಲಬತಡೆಯಾಗಿತ್ತು. ಸ್ಥಳೀಯರು ಕಲ್ಲನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಕಂಪೌಂಡಿನ ಭಾಗ ಇನ್ನಷ್ಟು ಕುಸಿಯುವ ಭೀತಿ ಇದೆ. ಇಲ್ಲೇ ಸಮೀಪದಲ್ಲಿ ಬರೆ ಕುಸಿದು ಮಣ್ಣು ಕಟ್ಟಡದ ಮೇಲೆ ಬಿದ್ದಿದೆ. ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಕಟ್ಟಡದ ಮೇಲೆ ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.