ಸುಳ್ಯ:ಸುಳ್ಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಸುಳ್ಯದ ಗಾಂಧಿನಗರದಲ್ಲಿ ನೂತವಾಗಿ ನಿರ್ಮಾಣಗೊಂಡಿರುವ ಸುಳ್ಯ ಕಮ್ಯೂನಿಟಿ ಸೆಂಟರ್ ಮತ್ತು ಮಸ್ಜಿದ್ ಹಾಜಿರಾ ಹಸನ್ ಇದರ ಉದ್ಘಾಟನಾ ಸಮಾರಂಭ ಫೆ.12 ರಂದು ನಡೆಯಿತು.ಉದ್ಯಮಿ ಯೂನುಸ್ ಹಸನ್ ಉದ್ಘಾಟನೆ ನೆರವೇರಿಸಿದರು.
ಬಳಿಕ ನಡೆದ ಸಭಾ ಸಮಾರಂಭದಲ್ಲಿ ಯೂನಸ್ ಹಸನ್ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ
ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಟಿ.ಆರಿಫ್ ಅಲಿ ಮಾತನಾಡಿ’ ಮನುಷ್ಯನ ದೇಹಕ್ಕೆ ಹೃದಯ ಇದ್ದಂತೆ, ಮಸೀದಿಗಳು ಮಾನವ ಜೀವನದ, ಸಮಾಜದ ಹೃದಯ ಎಂದು ಹೇಳಿದರು. ಹೃದಯ ನಮ್ಮ ದೇಹವನ್ನು ಶುದ್ದೀಕರಿಸಿದಂತೆ ಮಸೀದಿಗಳು ನಮ್ಮ ಜೀವನ ಹಾಗು ಸಮಾಜವನ್ನು ಶುದ್ದೀಕರಿಸುತ್ತದೆ .ಆಧ್ಯಾತ್ಮಿಕತೆ ಮನುಷ್ಯ ಜೀವನವನ್ನು ಉನ್ನತಿಗೆ ಏರಿಸುತ್ತದೆ ಎಂದು ಅವರು ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮಾತನಾಡಿ’ ಆರಾಧನಾಲಯಗಳು ನಮಗೆ ದೇವರನ್ನು ಹತ್ತಿರವಾಗಿಸುತ್ತದೆ ಎಂದು ಹೇಳಿದರು. ಮನುಷ್ಯತ್ವ, ಮಾನವತೆಯಿಂದ ಮನುಷ್ಯನಿಗೆ ಹತ್ತಿರವಾದರೆ, ದೇವರಿಗೆ ಹತ್ತಿರವಾಗಬಹುದು ಎಂದರು. ಮಸೀದಿಯು ಸಾಂತ್ವನ ನೀಡುವ ಕೇಂದ್ರಗಳು, ಪ್ರೀತಿ, ವಿಶ್ವಾಸ, ಮೌಲ್ಯಗಳನ್ನು ತುಂಬುವ ಶ್ರದ್ಧಾ ಕೇಂದ್ರ ಎಂದು ಅವರು ಹೇಳಿದರು.
ಮಂಗಳೂರು ಕಚ್ಚೀ ಮೇಮನ್ ಮಸೀದಿಯ ಖತೀಬರಾದ ಶುಐಬ್ ಹುಸೈನಿ ನದ್ವಿ, ವೇಳಂ ಶಾಂತಿನಗರ ಜುಮಾ ಮಸೀದಿ ಖತೀಬರಾದ ಹುಸೈನ್ ಕಾಮಿಲ್ ಸಖಾಫಿ, ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬರಾದ ಯಹ್ಯಾ ತಂಙಳ್ ಮದನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಅತಿಥಿಗಳಾಗಿ ಝಕರಿಯ್ಯಾ ಜೋಕಟ್ಟೆ, ಶರೀಫ್ ಬೋಳಾರ್, ಹೆಚ್.ಯು.ಫಾರೂಕ್ ತರೀಕೆರೆ, ಹನೀಫ್ ಹಾಜಿ ಗೋಳ್ತಮಜಲು, ಮುಹಮ್ಮದ್ ಬಶೀರ್, ಇಬ್ರಾಹಿಂ ಬೈಕಂಪಾಡಿ, ಕೆ.ಅಹ್ಮದ್ ಬಾವಾ, ಸಲಾಮ್ ರಕ್ವಾನಿ, ಮಹಮ್ಮದ್ ವಝೀರ್, ಸಲ್ಮಾನ್ ನೂರ್ ಹಸನ್, ಡಾ.ಉಮ್ಮರ್ ಬೀಜದಕಟ್ಟೆ, ಹೆಚ್.ಕೆ.ಕಾಸಿಮ್ ಅಹ್ಮದ್, ಹಾರಿಸ್ ಮುಕ್ಕ, ಡಾ.ಅಬ್ದುಲ್ ಮಜೀದ್ ಯು, ಆಸಿಫ್ ಡೀಲ್ಸ್ ಮಂಗಳೂರು, ಅಬ್ದುಲ್ ಜಲೀಲ್ ಇಂಜಿನಿಯರ್ ಮಂಗಳೂರು, ಮಹಮ್ಮದ್ ಇಂಜಿನಿಯರ್ ಬೆಳ್ಳಾರೆ, ಅಬ್ದುಸ್ಸಲಾಮ್ ಯು, ಕೆ.ಎಂ.ಶರೀಫ್, ಅಬ್ದುಲ್ ಬಶೀರ್ ಮಹಮ್ಮದ್, ಶಾಹುಲ್ ಹಮೀದ್, ಕೆ.ಸಿ.ಅಬ್ದುಲ್ ರಝಾಕ್ ಮತ್ತಿತರರು ಭಾಗವಹಿಸಿದ್ದರು.
ಸುಳ್ಯ ಎಜ್ಯುಕೇಶನಲ್ಮತ್ತು ಚಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ಉಸ್ಮಾನ್ ಎಸ್.ಎಂ.ಸ್ವಾಗತಿಸಿ, ಸಈದ್ ಇಸ್ಮಾಯಿಲ್ ವಂದಿಸಿದರು. ಜಲಾಲುದ್ದೀನ್ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ಎಜ್ಯುಕೇಶನಲ್ಮತ್ತು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಇಬ್ರಾಹಿಂ. ಬಿ ಹಾಗು ಟ್ರಸ್ಟಿಗಳು ಉಪಸ್ಥಿತರಿದ್ದರು.
ಇಲ್ಲಿ ಕಮ್ಯೂನಿಟಿ ಸೆಂಟರ್ ಮತ್ತು ಮಸ್ಜಿದ್ ಹಾಜಿರಾ ಹಸನ್, ನಾಗರಿಕ ಸೇವಾ ಕೇಂದ್ರ, ಫ್ಯಾಮಿಲಿ ಕೌನ್ಸಿಲಿಂಗ್ ಸೆಂಟರ್, ಅರೇಬಿಕ್ ಸ್ಕೂಲ್ ಕಾರ್ಯಾಚರಿಸಲಿದೆ.