ಸುಳ್ಯ:ಸುಳ್ಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಸುಳ್ಯದ ಗಾಂಧಿನಗರದಲ್ಲಿ ನೂತವಾಗಿ ನಿರ್ಮಾಣಗೊಂಡಿರುವ ಸುಳ್ಯ ಕಮ್ಯೂನಿಟಿ ಸೆಂಟರ್ ಮತ್ತು ಮಸ್ಜಿದ್ ಹಾಜಿರಾ ಹಸನ್ ಇದರ ಉದ್ಘಾಟನಾ ಸಮಾರಂಭ ಫೆ.12 ರಂದು ಪೂ.9.30ಕ್ಕೆ ನಡೆಯಲಿದೆ. ಉದ್ಯಮಿ ಯೂನುಸ್ ಹಸನ್ ಉದ್ಘಾಟನೆ ನೆರವೇರಿಸುವರು. ಜಮಾಅತೆ
ಇಸ್ಲಾಮಿ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಟಿ.ಆರಿಫ್ ಅಲಿ ಅಧ್ಯಕ್ಷತೆ ವಹಿಸುವರು. ಮುಖ್ಯ ಭಾಷಣಕಾರರಾಗಿ ಮಂಗಳೂರು ಕಚ್ಚೀ ಮೇಮನ್ ಮಸೀದಿಯ ಖತೀಬರಾದ ಶುಐಬ್ ಹುಸೈನಿ ನದ್ವಿ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ವೇಳಂ ಶಾಂತಿನಗರ ಜುಮಾ ಮಸೀದಿ ಖತೀಬರಾದ ಹುಸೈನ್ ಕಾಮಿಲ್ ಸಖಾಫಿ, ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬರಾದ ಯಹ್ಯಾ ತಂಙಳ್ ಮದನಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಎಸ್.ಅಂಗಾರ, ವಿರೋಧ ಪಕ್ಷದ ಉಪನಾಯಕರಾದ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸದಸ್ಯರಾದ ಸುಶೀಲಾ ಜಿನ್ನಪ್ಪ, ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್, ಜೆಡಿಎಸ್ ರಾಜ್ಯ ವಕ್ತಾರರಾದ ಎಂ.ಬಿ.ಸದಾಶಿವ ಮತ್ತಿತರರು ಭಾಗವಹಿಸಲಿದ್ದಾರೆ.