ಸುಳ್ಯ:ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ ವತಿಯಿಂದ ‘ಕಮ್ಯುನಿಟಿ ಯೂತ್ ಲೀಡರ್ಸ್ ಮೀಟ್’ ಸೆ.12ರಂದು ಮಂಗಳೂರಿನ ಇಂಡಿಯಾನ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್ನ ರಾಜ್ಯ ಸಮಿತಿ ಸದಸ್ಯ ಶರೀಫ್ ಕಂಠಿ ತಿಳಿಸಿದರು. ಸುಳ್ಯ ಪ್ರಸ್ ಕ್ಲಬ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು
ಮಂಗಳೂರು, ಪಡುಬಿದ್ರಿ , ಉಳ್ಳಾಲ, ಬಂಟ್ವಾಳ, ವಿಟ್ಲ, ಪುತ್ತೂರು, ಬೆಳ್ತಂಗಡಿ, ಕೈಕಂಬ- ಬಜ್ಪೆ, ಮೂಡಬಿದ್ರಿ ಕಾರ್ಕಳ , ಸುಳ್ಯ , ಸುರತ್ಕಲ್ , ಜೋಕಟ್ಟೆ ಕಾಪು , ಉಪ್ಪಿನಂಗಡಿ , ಫರಂಗಿಪೇಟೆ , ಶಿರೂರ್ , ಮತ್ತು ಕುಂದಾಪುರ ವಲಯ ವ್ಯಾಪ್ತಿಯ ಯುವಕರನ್ನು ಒಟ್ಟುಗೂಡಿಸಿ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುವುದು. ಕಾರ್ಯಕ್ರಮವನ್ನು ಸ್ಪೀಕರ್ ಯು.ಟಿ ಖಾದರ್ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

ಸಮುದಾಯದ ಸಬಲೀಕರಣ ಅಭಿವೃದ್ಧಿಯತ್ತ ಕೊಂಡುಹೋಗುವುದು ಸಂಸ್ಥೆಯ ಉದ್ದೇಶವಾಗಿದ್ದು ಕ್ರೀಡಾಪಟುಗಳನ್ನು ಸಿದ್ದಪಡಿಸಿ ಸ್ಪಾರ್ಧಾತ್ಮಕ ಮಟ್ಟದಲ್ಲಿ ಭಾಗವಹಿಸಲು ಉತ್ತೇಜಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಸುಳ್ಯ ಝೋನ್ ಅಧ್ಯಕ್ಷ ಫೈಝಲ್ ಕಟ್ಟೆಕ್ಕಾರ್ , ಕಾರ್ಯದರ್ಶಿ ಮುನಾಫ್ , ಇಕ್ಬಾಲ್ ಸುಣ್ಣಮೂಲೆ , ಮನೀಶ್ ಶೈನ್ , ಮುನೀರ್ ಶೈನ್ , ಅಬ್ಬುಸಾಲಿ ಪೈಚಾರ್ , ಸಿದ್ದಿಕ್ಕ್ , ನಿಯಾಝ್ ಶೈನ್ ಉಪಸ್ಥಿತರಿದ್ದರು.












