ಬೆಳ್ಳಾರೆ: ಡಾ.ಕೆ .ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಕಾಲೇಜು ಮಟ್ಟದ ಕಾಮರ್ಸ್ ಫೆಸ್ಟ್ -ಕ್ಯಾಂಪಸ್ ಹೇಸ್ಟ್ 2k23 ನಡೆಯಿತು. ನಿರ್ವಹಣೆಗೆ ಸಂಬಂಧಪಟ್ಟ ಸ್ಪರ್ಧೆಗಳಾದ ಬೆಸ್ಟ್ ಮ್ಯಾನೇಜರ್ , ಲಾ ಮಜಿಶಿಯ , ಇಂಟಲಿಜೆನ್ಸಿಯ, ಎಲ್ ಫಿನಾನ್ಸ್, ಮುಂತಾದ
ಸ್ಪರ್ಧೆಗಳನ್ನು ಪ್ರಥಮ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಯತೀಶ್ ಕುಮಾರ್ ಎಂ. , ವ್ಯಕ್ತಿತ್ವ ವಿಕಸನದಲ್ಲಿ ಫೆಸ್ಟನ ಮಹತ್ವದ ಕುರಿತು ಮಾತನಾಡಿ,ವಿಜೇತರಾದವರಿಗೆ ಶುಭ ಹಾರೈಸಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕರಾದ ಪ್ರತಿಮಾ ಅವರು ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೋ.ದಾಮೋದರ ಕಣಜಾಲು ಮಾತನಾಡಿ ವಿಜೇತರಾದವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು .ದ್ವಿತೀಯ ಎಂ.ಕಾಂ.ವಿದ್ಯಾರ್ಥಿ ನಿತೀಶ್ ಸ್ವಾಗತಿಸಿ , ಫೆಸ್ಟನ ವಿದ್ಯಾರ್ಥಿ ಸಂಯೋಜಕರಾದ ಶ್ರವಣ್ ಕುಮಾರ್ ವಂದನಾರ್ಪಣೆ ನೆರವೇರಿಸಿದರು. ದ್ವಿತೀಯ ಎಂ.ಕಾಂ.ವಿದ್ಯಾರ್ಥಿನಿ
ಶ್ರೇಯಾ ಕೆ. ಎಸ್ ನಿರೂಪಿಸಿದರು.