ಪೆರುವಾಜೆ: ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ಆಯೋಜಿಸಿದ ಒಂದು ದಿನದ ರಾಷ್ಟ್ರಮಟ್ಟದ ಅಂತರ ಕಾಲೇಜು ಕಾಮರ್ಸ್ ಫೆಸ್ಟ್ “ಎಕ್ಸಲೆನ್ಸಿಯ 2K24” ರಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಪ್ರಥಮ ಸ್ಥಾನವನ್ನು ಪಡೆದುಕೊಂಡಿತು, ದ್ವಿತೀಯ ಸ್ಥಾನವನ್ನು
ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಪಡೆದುಕೊಂಡಿತು. ದೇಶದ ವಿವಿಧ ರಾಜ್ಯಗಳ ಹದಿನಾರು ಕಾಲೇಜುಗಳಿಂದ ವಿದ್ಯಾರ್ಥಿಗಳು ಈ ಫೆಸ್ಟ್ನ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡರು.
ನಿವೃತ ಹೆಚ್ಚುವರಿ ನಿರ್ದೇಶಕರಾದ ರಾಜಶೇಖರ್ ಹೆಬ್ಬಾರ್ ಸಿ ಅವರು ಮುಖ್ಯ ಉದ್ಘಾಟಕರಾಗಿ ಆಗಮಿಸಿ ಇಂದಿನ ವಿದ್ಯಾರ್ಥಿಗಳು ಧನಾತ್ಮಕವಾಗಿ ಹೇಗೆ ತಮ್ಮ ಜೀವನ ರೂಪಿಸಬೇಕು ಎನ್ನುವ ಕುರಿತು ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಕಸ್ಟಮ್ಸ್ ಅಧಿಕಾರಿ ಆರ್.ಕೆ ಭಟ್ ಕುರುಂಬುಡೇಲು ಅವರು ವ್ಯಕ್ತಿತ್ವ ವಿಕಸನದಲ್ಲಿ ಕಾಮರ್ಸ್ ಫೆಸ್ಟ್ನ ಪಾತ್ರದ ಕುರಿತು ಮಾತನಾಡಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯದ ಕೆ.ವಿ.ಜಿ ಡೆಂಟಲ್ ಕಾಲೇಜಿನ ಡಾ. ಮನೋಜ್ ಕುಮಾರ್ ಎ.ಡಿ ಹಾಗೂ ವಾಸುದೇವ ಪೆರುವಾಜೆ ಅವರು ಆಗಮಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ದಾಮೋದರ ಕಣಜಾಲು ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಕಾಂತರಾಜು ಸಿ, ಸಾಂಸ್ಕೃತಿಕ ಸಮಿತಿಯ ಸಂಯೋಜಕರಾದ ಯತೀಶ್ ಕುಮಾರ್ ಎಂ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕರಾದ ಪ್ರತಿಮಾ, ವಾಣಿಜ್ಯ ಸಂಘದ ವಿದ್ಯಾರ್ಥಿ ಪದಾಧಿಕಾರಿಗಳಾದ ನಿಶ್ಮಿತ್ ರೈ, ಪವಿತ್ರ ಎಸ್, ನಿತಿನ್ ಹಾಗೂ ಫೆಸ್ಟ್ ಸಂಯೋಜಕರಾದ ಹೇಮಂತ್ ಎ ಹಾಗೂ ಪ್ರಜ್ಞಾ ಸಿ.ಎಂ ಉಪಸ್ಥಿತರಿದ್ದರು.