ಸುಳ್ಯ:ಕಳೆದ ಕೆಲವು ದಿನಗಳಿಂದ ಭಾರೀ ಚಳಿಯ ಅನುಭವ ಉಂಟಾಗುತ್ತಿದ್ದು ಮುಂದಿನ ಕೆಲವು ದಿನ ಚಳಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾರೀ ಚಳಿಯ ಅನುಭವ ಆಗುತ್ತಿದೆ. ಕಳೆದ ವಾರ ಕೆಲವು ದಿನ ವಿಪರೀತ ಚಳಿ ಉಂಟಾಗಿತ್ತು. ಬಳಿಕ
ಮೋಡ ಕವಿದ ವಾತಾವರಣ ಉಂಟಾದ ಕಾರಣ ಚಳಿ ಕಮ್ಮಿ ಆಗಿತ್ತು. ಇದೀಗ 2 ದಿನಗಳಿಂದ ಮತ್ತೆ ಚಳಿ ಆರಂಭವಾಗಿದೆ. ಬೆಳಗ್ಗಿನ ಜಾವ ಮಂಜು ಮುಸುಕಿದ ವಾತಾವರಣದೊಂದಿಗೆ ಮೈ ನಡುಗುವ ಚಳಿಯ ಅನುಭವ ಆಗುತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಳಿಗ್ಗೆ ಮಂಜು ಮುಸುಕಿದ ವಾತಾವರಣ ಮತ್ತು ಉತ್ತಮ ಚಳಿಯಾಗುತಿದೆ. ರಾಜ್ಯದಲ್ಲಿ ಕೆಲವು ದಿನಗಳ ದಿನಗಳ ಕಾಲ ಶೀತಗಾಳಿ ಬೀಸಲಿದ್ದು ಚಳಿ ಹೆಚ್ಚಾಗಲಿದೆ.ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಶೀತಗಾಳಿ ಹೆಚ್ಚಾಗುವ ಸಾಧ್ಯೆತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.













