ಸುಳ್ಯ: ಸಿಎನ್ಜಿ ವಾಹನಗಳಿಗೆ ಗ್ಯಾಸ್ ಫಿಲ್ ಮಾಡುವ ವ್ಯವಸ್ಥೆ ಸುಳ್ಯದಲ್ಲಿ ಆರಂಭಗೊಂಡಿದೆ. ಹಿರಿಯ ಉದ್ಯಮಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಅವರ ಪುತ್ರ ಕರಣ್ ಅಡ್ಪಂಗಾಯ ಅವರ ಮಾಲಕತ್ವದ ಸುಳ್ಯ ಓಡಬಾಯಿಯ ಲಕ್ಷ್ಮಿ ನಾರಾಯಣ ಎಂಟರ್ ಪ್ರೈಸಸ್ನಲ್ಲಿ ಸಿಎನ್ಜಿ ಗ್ಯಾಸ್ ದೊರೆಯಲಿದೆ. ಗ್ರಾಹಕರ ಅನುಕೂಲಕ್ಕಾಗಿ ಲಕ್ಷ್ಮೀನಾರಾಯಣ ಎಂಟರ್ ಪ್ರೈಸಸ್ನ ಓಡಬಾಯಿಯ ಪೆಟ್ರೋಲ್ ಪಂಪ್ನಲ್ಲಿ ಸುಳ್ಯದಲ್ಲಿ ಪ್ರಥಮ ಬಾರಿಗೆ
ಸಿಎನ್ಜಿ ಗ್ಯಾಸ್ ಫಿಲ್ಲಿಂಗ್ ಸ್ಟೇಷನ್ ಆರಂಭಿಸಿದೆ. ಡಿ.15ರಂದು ಈ ಸೇವೆ ಆರಂಭವಾಗಿದ್ದು, ಜನತೆ ತಮ್ಮ ವಾಹನಗಳಿಗೆ ಗ್ಯಾಸ್ ಫಿಲ್ ಮಾಡಬಹುದು. ಅತ್ಯುತ್ತಮ ಗುಣಮಟ್ಟದ ಇಂಧನ ಪೂರೈಕೆ ಮಾಡುವ ಮೂಲಕ ಹೆಸರು ಗಳಿಸಿರುವ ಲಕ್ಷ್ಮಿನಾರಾಯಣ ಎಂಟರ್ಪ್ರೈಸಸ್ನಲ್ಲಿ ಸಿಎನ್ ಜಿ ಗ್ಯಾಸ್ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಧನಂಜಯ ಅಡ್ಪಂಗಾಯ ಹೇಳಿದ್ದಾರೆ.
ಸುಳ್ಯ ತಾಲೂಕಿನ ಸಿಎನ್ಜಿ ಅಳವಡಿತ ವಾಹನ ಚಾಲಕರ ಬಹು ಬೇಡಿಕೆಯನ್ನು ಗಮನಿಸಿ ಸುಳ್ಯದ ಒಡಬಾಯಿಯ ತಮ್ಮ ಪೆಟ್ರೋಲ್ ಪಂಪ್ನಲ್ಲಿ ಸಿಎನ್ಜಿ ಫಿಲ್ಲಿಂಗ್ ಕೇಂದ್ರ ತೆರೆದಿದ್ದು, ಇದರಿಂದ ಕಾರು, ರಿಕ್ಷಾ ಸೇರಿದಂತೆ ಸಿಎನ್ಜಿ ಅಳವಡಿತ ಎಲ್ಲಾ ವಾಹನಗಳಿಗೆ ಅನುಕೂಲವಾಗಲಿದೆ. ಕೆ ಜಿ ಗೆ 82ರೂ ಗಳಿಗೆ ದೊರೆಯುವ ಈ ಇಂಧನದಲ್ಲಿ ವಾಹನಗಳಿಗೆ 40 ಕಿ ಮೀ ಗಿಂತಲೂ ಅಧಿಕ ಮೈಲೇಜ್ ಸಿಗಲಿದೆ. ಸಂಪೂರ್ಣ ಹಸಿರು ಇಂಧನವಾಗಿದ್ದು , ಹೊಗೆರಹಿತವಾಗಿ ಪರಿಸರಕ್ಕೆ ಪೂರಕವೂ ಆಗಿದೆ.

ಉದ್ಘಾಟನಾ ಸಮಾರಂಭ:
ಡಿ.15ರಂದು ನಡೆದ ಸಮಾರಂಭದಲ್ಲಿ
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ನ ಮಾರ್ಕೆಟಿಂಗ್ ಹೆಡ್ ದಿನೇಶ್ ಗೌರ್ ಸಿಎನ್ಜಿ ಗ್ಯಾಸ್ ಫಿಲ್ಲಿಂಗ್ ಸ್ಟೇಷನ್ ಉದ್ಘಾಟಿಸಿದರು. ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ನ ಮಾರ್ಕೆಟಿಂಗ್ ಹೆಡ್ ಧರ್ಮೇಂದ್ರ, ಅನಿರುದ್ಧ್ ಶೆಟ್ಟಿ, ಹಿರಿಯ ಉದ್ಯಮಿ ಧನಂಜಯ ಅಡ್ಪಂಗಾಯ, ಕರುಣಾಕರ ಅಡ್ಪಂಗಾಯ, ಪುಂಡರೀಕ ಅಡ್ಪಂಗಾಯ,ಸಂಸ್ಥೆಯ ಮಾಲಕರಾದ ಕರಣ್ ಅಡ್ಪಂಗಾಯ,
ಬೆಟ್ಟ ರಾಜಾರಾಮ್ ಭಟ್, ಸುರೇಶ್ಚಂದ್ರ ಕಮಿಲ, ಶಶಿಕಲಾ ಶುಭಕರ ಕುಂಬಕ್ಕೋಡ್, ಉಮಾನಾಥ್, ಸಂಸ್ಥೆಯ ಮ್ಯಾನೇಜರ್ ವಿಖಿತ್ ಮತ್ತಿತರರು ಉಪಸ್ಥಿತರಿದ್ದರು.












