ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಶಿವಾಜಿನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಹಿಂದೂ ರುದ್ರಭೂಮಿಗೆ ಸಿಲಿಕಾನ್ ಚೇಂಬರ್ ಮಂಜೂರಾಗಿರುತ್ತದೆ. ಅದರ ಮಂಜೂರಾತಿ


ಪತ್ರವನ್ನು ಗ್ರಾಮ ಪಂಚಾಯತ್ಗೆ ಹಸ್ತಾಂತರಿಸಲಾಯಿತು, ಯೋಜನೆಯ ವತಿಯಿಂದ ಸುಳ್ಯ ತಾಲೂಕು ಯೋಜನಾಧಿಕಾರಿ ನಾಗೇಶ್, ಸುಳ್ಯ ತಾಲೂಕು ಕೆಂದ್ರ ಒಕ್ಕೂಟ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ, ಜನಜಾಗೃತಿ ಅಜ್ಜಾವರ ವಲಯಾಧ್ಯಕ್ಷರಾದ ಶಿವಪ್ರಕಾಶ್ ಅಡ್ಪಂಗಾಯ, ಅಜ್ಜಾವರ ವಲಯ ಮೇಲ್ವಿಚಾರಕರಾದ ವಿಶಾಲ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಪಂಚಾಯತ್ ಸಿಬ್ಬಂದಿ ಬಾಲಕೃಷ್ಣ ಮಾವಂಜಿ,ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ಬಿ, ಒಕ್ಕೂಟ ಪದಾಧಿಕಾರಿ ವಿಶಾಲಾಕ್ಷಿ, ಸೇವಾ ಪ್ರತಿನಿಧಿಗಳಾದ ವೇದಾವತಿ, ಸುನೀತ ಕಣೆಮರಡ್ಕ, ಉಪಸ್ಥಿತರಿದ್ದರು