ಸುಳ್ಯ:ಸುಳ್ಯ ವೃತ್ತ ನಿರೀಕ್ಷಕರಾಗಿ ಕೆ.ಸತ್ಯನಾರಾಯಣ ಅಧಿಕಾರ ವಹಿಸಿಕೊಂಡಿದ್ದಾರೆ. ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ಮೋಹನ್ ಕೊಠಾರಿ ಅವರು ವರ್ಗಾವಣೆಯಾದ ಹಿನ್ನಲೆಯಲ್ಲಿ ಸತ್ಯನಾರಾಯಣ ಅವರು ಸುಳ್ಯ ವೃತ್ತ ನಿರೀಕ್ಷರಾಗಿ ಅಧಿಕಾರ ವಹಿಸಿದ್ದಾರೆ. ಚುನಾವಣಾ ಕರ್ತವ್ಯದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ವೃತ್ತ ನಿರೀಕ್ಷಕರಾಗಿದ್ದ ಸತ್ಯನಾರಾಯಣ ಅವರು ಸುಳ್ಯ ವೃತ್ತಕ್ಕೆ ಆಗಮಿಸಿದ್ದಾರೆ.ಸುಳ್ಯ ವೃತ್ತ
ನಿರೀಕ್ಷಕರಾಗಿದ್ದ ಮೋಹನ್ ಕೊಠಾರಿ ಅವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ಘಟಕಕ್ಕೆ ವರ್ಗಾವಣೆಯಾಗಿದ್ದಾರೆ.
ಸತ್ಯನಾರಾಯಣ ಅವರು ಚಿಕ್ಕಮಗಳೂರು ಗ್ರಾಮಾಂತರ, ಡಿಸಿಐಬಿ ಚಿಕ್ಕಮಗಳೂರು, ಕಡೂರು ವೃತ್ತ, ಚಿತ್ರದುರ್ಗ ಲೋಕಾಯುಕ್ತ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಸಬ್ ಇನ್ಸ್ಪೆಕ್ಟರ್ ಆಗಿ ಬೆಂಗಳೂರು ಶ್ರೀರಾಂಪುರ, ಹಾವೇರಿ ಜಿಲ್ಲೆಯ ಶಿಗ್ಗಾಂ, ಚಿಕ್ಕಮಗಳೂರು, ಕಡೂರು, ಚಿಕ್ಕಮಗಳೂರು ಗ್ರಾಮಾಂತರ, ಲಿಂಗದಹಳ್ಳಿ, ಚಿಕ್ಕಮಗಳೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಚಿಕ್ಕಮಗಳೂರು ಶೃಂಗೇರಿ ಮೂಲದ ಸತ್ಯನಾರಾಯಣ ಅವಿಗೆ 2018ರಲ್ಲಿ ರಾಷ್ಟ್ರಪತಿ ಪದಕ, 2019ರಲ್ಲಿ ಮುಖ್ಯಮಂತ್ರಿ ಪದಕ ಪಡೆದಿದ್ದರು.ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಸುಳ್ಯ ಎಸ್ಐ ಈರಯ್ಯ ದೂಂತೂರು, ಬೆಳ್ಳಾರೆ ಎಸ್ಐ ಸಂತೋಷ್ ಉಪಸ್ಥಿತರಿದ್ದರು.
ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಆದ್ಯತೆ:
ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಅದ್ಯತೆ ನೀಡುವುದಾಗಿ ಗುರುವಾರ ಸಂಜೆ ಅಧಿಕಾರ ಸ್ವೀಕರಿಸಿದ ಬಳಿಕ ‘ಸುಳ್ಯ ಮಿರರ್’ ಮಾತನಾಡಿದ ಸತ್ಯನಾರಾಯಣ ಅವರು ಹೇಳಿದ್ದಾರೆ.







