ಮಂಗಳೂರು: ಕಳೆದ ಬಾರಿಯ ಬಹುಮತದ ಹತ್ತಿರ ಬರಲು ಸಾಧ್ಯವಾಗದಿದ್ದರೂ ತಮ್ಮ ಭದ್ರಕೋಟೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರು ತೀವ್ರ ಸ್ಪರ್ಧೆ ನೀಡಿದ್ದರೂ, ಭರ್ಜರಿ ಗೆಲುವಿನ
ಮೂಲಕ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮೂಲಕ ದಕ್ಷಿಣ ಕನ್ನಡ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಯಲ್ಲಿ ಉಳಿಸಿಕೊಂಡಿದೆ. ಬ್ರಿಜೇಶ್ ಚೌಟ 1,47,611 ಮತಗಳ ಭರ್ಜರಿ ಲೀಡ್ ಪಡೆದಿದ್ದಾರೆ. ಕ್ಯಾಪ್ಟನ್ ಬ್ರಿಜೇಶ್ ಚೌಟ 7,55,814 ಮತ ಪಡೆದರೆ, ಪದ್ಮರಾಜ್ ಆರ್ ಪೂಜಾರಿ 6,08,203 ಮತಗಳು ಪಡೆದಿದ್ದಾರೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಗೆಲುವು ಸಾಧಿಸಿದ್ದಾರೆ. 2,57,178 ಮತಗಳ ಅಂತರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಗೆಲುವು ಸಾಧಿಸಿದ್ದಾರೆ. ಕೋಟ 7,27,393 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ 4,70,215 ಮತಗಳನ್ನು ಪಡೆದಿದ್ದಾರೆ.