ಪೆರುವಾಜೆ: ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ದೇವಿಯ ಬಲಿ ಬಿಂಬಕ್ಕೆ ಚಿನ್ನದ ಕವಚ ಸಮರ್ಪಣೆ ಜ.18ರಂದು ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಪದ್ಮನಾಭ ಶೆಟ್ಟಿ ಪೆರುವಾಜೆ ತಿಳಿಸಿದ್ದಾರೆ. ಪೆರುವಾಜೆ ದೇವಳದಲ್ಲಿ ಬ್ರಹ್ಮರಥ ಸಮರ್ಪಣೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಶತಮಾನದ ಬಳಿಕ
ದೇವಳಕ್ಕೆ ಬ್ರಹ್ಮ ರಥ ಸಮರ್ಪಣೆಯಾಗಿದ್ದು ಜ.19ರಂದು ಬ್ರಹ್ಮ ರಥೋತ್ಸವ ನಡೆಯಲಿದೆ. ಈ ಪ್ರಯುಕ್ತ ಸುಮಾರು ಎಂಟು ಲಕ್ಷ ರೂ ವೆಚ್ಚದಲ್ಲಿ ದೇವಳದ ವತಿಯಿಂದ ಉತ್ಸವ ಬಿಂಬಕ್ಕೆ ಚಿನ್ನದ ಕವಚ ಸಮರ್ಪಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ಬ್ರಹ್ಮರಥ ಸಮರ್ಪಣೆಯಾಗಿದೆ. ಇಂದಿನಿಂದ ಕ್ಷೇತ್ತದಲ್ಲಿ ಜಾತ್ರೋತ್ಸವ ನಡೆಯಲಿದ್ದು ಜ.19ರಂದು ಬ್ರಹ್ಮರಥೋತ್ಸವ ನಡೆಯಲಿದೆ ಎಲ್ಲಾ ಭಕ್ತರು ಭಾಗವಹಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಅವರು ವಿನಂತಿಸಿದರು.
ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ, ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಜಿ.ಪಂ.ಮಾಜಿ ಸದಸ್ಯೆ ರಾಜೀವಿ ಆರ್.ರೈ ಮತ್ತಿತರರು ಉಪಸ್ಥಿತರಿದ್ದರು.









