ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾಗಿ ಸುಳ್ಯದ ನೋಟರಿ ವಕೀಲರಾದ ಜೆ.ಎನ್.ಅಬೂಬಕ್ಕರ್ ಅಡ್ಕಾರ್ ಅವರನ್ನು ಸರಕಾರ ನೇಮಕ ಮಾಡಿದೆ.ಎರಡೂವರೆ ತಿಂಗಳ ಹಿಂದೆ ನೇಮಕವಾಗಿ ಆದೇಶವಾಗಿದ್ದರೂ ಆದೇಶಕ್ಕೆ ತಡೆ ಉಂಟಾಗಿತ್ತು. ಇದೀಗ ತಡೆ ತೆರವಾಗಿದ್ದು ನೇಮಕಾತಿ ಆದೇಶ ಮಾಡಲಾಗಿದೆ ಎಂದು ಅಬೂಬಕ್ಕರ್ ಅಡ್ಕಾರ್ ತಿಳಿಸಿದ್ದಾರೆ. ಜಿಲ್ಲಾ ಸಮಿತಿಗೆ ಅಧ್ಯಕ್ಷರು ಹಾಗೂ
4 ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಬಾಲನ್ಯಾಯ ಮಕ್ಕಳ ಪಾಲನೆ ಮತ್ತು ರಕ್ಷಣಾ ಕಾಯ್ದೆ 2015 ತಿದ್ದುಪಡಿ ಕಾಯ್ದೆ 2021 ಹಾಗೂ ಬಾಲನ್ಯಾಯ ಮಾದರಿ ನಿಯಮಗಳು 2016ರ ಅನ್ವಯ ತಿದ್ದುಪಡಿ ಮಾದರಿ ನಿಯಮಗಳು 2022 ರಂತೆ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದು ಅಬೂಬಕ್ಕರ್ ಅಡ್ಕಾರ್ ತಿಳಿಸಿದ್ದಾರೆ. ಅಬೂಬಕ್ಕರ್ ಅಡ್ಕಾರ್ ಸುಮಾರು 20 ವರ್ಷಗಳಿಂದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2016ರಿಂದ ಕೇಂದ್ರ ಸರಕಾರದ ನೋಟರಿಯಾಗಿ ನೇಮಕಗೊಂಡಿದ್ದಾರೆ