ಸುಳ್ಯ:ಅಜ್ಜಾವರ ಗ್ರಾಮದ ಮೇನಾಲದಲ್ಲಿ ಶೇಖರ ಮೇನಾಲ ಮಾಲಕತ್ವದಲ್ಲಿ ನೂತನ ಎಸ್.ಕೆ ಚಿಕನ್ ಸೆಂಟರ್ ಇಂದು ಶುಭಾರಂಭಗೊಂಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ SIDBI ಸಾಲದ ನೆರವಿನೊಂದಿಗೆ
ಆರಂಭಗೊಂಡ ಈ ಉದ್ದಿಮೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಜ್ಜಾವರ ವಲಯ ಮೇಲ್ವಿಚಾರಕರಾದ ವಿಶಾಲರವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಾಲೂಕು ಜನಜಾಗೃತಿ ವೇಧಿಕೆಯ ನಿಕಟಪೂರ್ವಾಧ್ಯಕ್ಷ ಮಹೇಶ್ ಕುಮಾರ್ ಮೇನಾಲ, ಸುಭೋದ್ ಶೆಟ್ಟಿ ಮೇನಾಲ,ನವೀನ್ ಕುಮಾರ್ ಮೇನಾಲ, ಶ್ರೀಧರ ರಾವ್, ರವಿ ರಾವ್, ಮೇನಾಲ ಒಕ್ಕೂಟ ಅಧ್ಯಕ್ಷೆ ಅರ್ಚನಾ, ನಿಕಟ ಪೂರ್ವಾಧ್ಯಕ್ಷ ಸೋಮನಾಥ, ಪದಾಧಿಕಾರಿ ವಸಂತಿ, ಸತ್ಯದೇವತೆ ಸ್ವಸಹಾಯ ಸಂಘದ ಸದಸ್ಯರು ಹಾಗೂ ಶೇಖರ್ ಕುಟುಂಬಸ್ಥರು ಉಪಸ್ಥಿತರಿದ್ದರು.