ಸುಳ್ಯ: ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರಾ ಪ್ರಯುಕ್ತ ದೇವರ ಪಟ್ಟಣ ಸವಾರಿ ಜ.11ರಂದು ರಾತ್ರಿ ನಡೆಯಿತು.ಪೇರಾಲು ಬಜಪ್ಪಿಲ ಉಳ್ಳಾಕುಲು ದೈವಸ್ಥಾನದಿಂದ ಭಂಡಾರ ಆಗಮಿಸಿದ ಬಳಿಕ ಚೆನ್ನಕೇಶವ ದೇವಸ್ಥಾನದಲ್ಲಿ ದರ್ಶನ ಬಲಿ ಆದ ಬಳಿಕ ನಗರದ ವಿವಿಧ ಕಟ್ಟೆಗಳಲ್ಲಿ ಚೆನ್ನಕೇಶವನಿಗೆ ವೈಭವದ
ಕಟ್ಟೆಪೂಜೆ ನೆರವೇರಿತು. ಪೊಲೀಸ್ ಠಾಣೆ, ಕಲ್ಕುಡ, ಗಾಂಧಿನಗರ ಅರಣ್ಯ ಇಲಾಖೆ ಕಚೇರಿ ಬಳಿ, ವಿಷ್ಣುಸರ್ಕಲ್, ಕೇರ್ಪಳ ಮತ್ತಿತರ ಕಡೆಗಳಲ್ಲಿ ಚೆನ್ನಕೇಶವನಿಗೆ ಕಟ್ಟೆಪೂಜೆ ನೆರವೇರಿತು. ಪೊಲೀಸ್ ಠಾಣೆಯಲ್ಲಿ ನಡೆದ ಕಟ್ಟೆಪೂಜೆಯ ಬಳಿಕ ಆರಕ್ಷಕ ಉಪನಿರೀಕ್ಷರಾದ ಸಂತೋಷ್.ಬಿ.ಪಿ, ಸರಸ್ವತಿ ಸೇರಿದಂತೆ ಪ್ರಮುಖರು ಪ್ರಸಾದ ಸ್ವೀಕರಿಸಿದರು.

ಪಟ್ಟಣ ಸವಾರಿಯ ಹಿನ್ನಲೆಯಲ್ಲಿ ವಿವಿಧ ಕಟ್ಟೆಯಲ್ಲಿ ವಿಶೇಶ ಪೂಜೆ ನೆರವೇರಿತು.ಪಟ್ಟಣ ಸವಾರಿ ಪ್ರಯುಕ್ತ ವಿವಿಧ ಕಡೆಗಳಲ್ಲಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಲ್ಲೆಡೆ ನೂರಾರು ಮಂದಿ ಭಕ್ತರು ಸೇರಿದ್ದರು. ಕಟ್ಟೆಪೂಜೆಯ ಬಳಿಕ ಪಯಸ್ವಿನಿ ನದಿಯಲ್ಲಿ ಅವಭೃತ ಸ್ನಾನವಾಗಿ ಧ್ವಜಾವರೋಹಣ ಆಯಿತು. ಆ ಮೂಲಕ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವ ಸಂಪನ್ನಗೊಂಡಿತು.












