ಸುಳ್ಯ: ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ವೈಭವದ ಜಾತ್ರೋತ್ಸವ ನಡೆಯುತಿದೆ. ಇಂದು ಬೆಳಿಗ್ಗೆ ಶ್ರೀ ದೇವರ ದೊಡ್ಡ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಸಾವಿರಾರು ಮಂದಿ ಭಕ್ತರು ದೊಡ್ಡ ದರ್ಶನ ಬಲಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ರಾತ್ರಿ

ಕಲ್ಕುಡ ದೈವಗಳ ಭಂಡಾರ ಬಂದ ಬಳಿಕ ರಥೋತ್ಸವ ನಡೆಯಲಿದೆ. ಬುಧವಾರ ರಾತ್ರಿ ಮಿತ್ತೂರು ದೈವಗಳ ಭಂಡಾರ ಬಂದ ಬಳಿಕ ಕಾನತ್ತಿಲ ದೈವಗಳ ಭಂಡಾರ ಆಗಮಿಸಿದ ವಾಲಸಿರಿ ಉತ್ಸವ ನಡೆಯಿತು.









