ಬೆಳ್ತಂಗಡಿ: ಚಿಕ್ಕಮಗಳೂರು–ಕರಾವಳಿ ನಡುವಿನ ಸಂಪರ್ಕ ರಸ್ತೆ ಚಾರ್ಮಾಡಿ ಘಾಟಿ ರಸ್ತೆಯ ಏಳನೇ ತಿರುವಿನಲ್ಲಿ ಬುಧವಾರ ಸಂಜೆ ಒಂಟಿ ಸಲಗ ಕಾಣಿಸಿಕೊಂಡಿದ್ದು, ಕೆಲ ಹೊತ್ತು ಪ್ರಯಾಣಿಕರಲ್ಲಿ ಆತಂಕ ಸೃಷ್ಠಿಸಿತು. ರಸ್ತೆ ಬದಿಯಲ್ಲೇ ಆನೆ ಕೆಲ ಹೊತ್ತು ನಿಂತುಕೊಂಡಿದ್ದರಿಂದ ಆನೆ ಭಯದಿಂದ ವಾಹನಗಳು ಮುಂದೆ ಸಾಗಲಾರದೆ ಘಾಟಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಯಿತು. ಬಳಿಕ ಆನೆಯು ರಸ್ತೆಯಂಚಿನ ಅರಣ್ಯದೊಳಗೆ ಪ್ರವೇಶಿಸಿತು. ಆನೆಯು ಅರಣ್ಯದತ್ತ ಸರಿದ ನಂತರ ವಾಹನಗಳು ಸಂಚರಿಸಿದವು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್ ಮಾಡಿರಿ.
previous post