ಬೆಂಗಳೂರು: ಚಂದ್ರನ ಮೇಲೆ ಚಲಿಸಿ ಅಧ್ಯಯನ ನಡೆಸುತ್ತಿರುವ ಪ್ರಗ್ಯಾನ್ ರೋವರ್ಗೆ ದೊಡ್ಡ ಹೊಂಡವೊಂದು ಎದುರಾಗಿದ್ದು ಅದನ್ನು ತಪ್ಪಿಸಿ ತನ್ನ ಯಾತ್ರೆಯನ್ನು ಮುಂದುವರಿಸಿದೆ.ಚಂದ್ರನ ದಕ್ಷಿಣ ಧ್ರುವದ ಮೇಲೆ ಆಗಸ್ಟ್ 23ರಂದು ಕಾಲಿಟ್ಟ ವಿಕ್ರಂ ಲ್ಯಾಂಡರ್ನಿಂದ ಕೆಳಗಿಳಿದು ಚಂದ್ರನ ಮೇಲೆ ಸುತ್ತಾಡುತ್ತಿರುವ ಪ್ರಗ್ಯಾನ್ ರೋವರ್ಗೆ 4 ಮೀಟರ್ ಸುತ್ತಳತೆಯ ಬೃಹತ್ ಕುಳಿಯನ್ನು ಎದುರಿಸಿತು.ಈ ಅನಿರೀಕ್ಷಿತ ತಡೆಯ ಬಗ್ಗೆ
ರೋವರ್ ಆ ಸ್ಥಳದಿಂದ ಕೇವಲ ಮೂರು ಮೀಟರ್ ದೂರದಲ್ಲಿರುವಾಗ ತಿಳಿದು ಬಂದ ಕಾರಣ ತಕ್ಷಣ ರೋವರ್ ತನ್ನ ಹಾದಿ ಬದಲಾಯಿಸಿದೆ.
ಈ ಬೃಹತ್ ಹೊಂಡದ ಆಳ 100 ಎಂಎಂನಷ್ಟಿತ್ತು. ಆದರೆ ಈ ಕುಳಿ ತಪ್ಪಿಸಿ ರೋವರ್ ಬೇರೆ ಹಾದಿಯಲ್ಲಿ ಮುಂದಕ್ಕೆ ಚಲಿಸಲು ಸಾಧ್ಯವಾಗಿರುವುದು ಬೆಂಗಳೂರಿನ ಇಸ್ರೋ ಕಂಟ್ರೋಲ್ ರೂಮ್ನಲ್ಲಿರುವ ವಿಜ್ಞಾನಿಗಳಲ್ಲಿ ಇನ್ನಷ್ಟು ಆತ್ಮವಿಶ್ವಾಸ ಮೂಡಿಸಿದೆ.
ಹೊಂಡ ಪತ್ತೆಯಾಗುತ್ತಿದ್ದಂತೆಯೇ ಇಸ್ರೋ ತಂಡ ಅದರ ಹಾದಿ ಬದಲಾಯಿಸಿ ಸುರಕ್ಷಿತವಾಗಿರುವಂತೆ ನೋಡಿಕೊಂಡಿದೆ ಎಂದು ಇಸ್ರೋ ಹೇಳಿದೆ. ರೋವರ್ಗೆ ಎದುರಾದ ಕುಳಿ ಮತ್ತು ಹಾದಿ ಬದಲಿಸಿ ಸಂಚರಿಸಿದ ಚಿತ್ರಗಳನ್ನು ಇಸ್ರೋ ಹಂಚಿಕೊಂಡಿದೆ.