ಸುಳ್ಯ:ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗುವ ಮೂಲಕ ವಿಶ್ವದಲ್ಲಿ ಭಾರತದ ಗೌರವ ಹೆಚ್ಚಾಗಬೇಕು ಮತ್ತು ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳ ಪರಿಶ್ರಮವು ಸಾರ್ಥಕವಾಗಬೇಕು ಎಂದು ಸುಳ್ಯ
ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಸುಳ್ಯದ ಬಿಜೆಪಿ ಪ್ರಮುಖರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸುಬೋದ್ ಶೆಟ್ಟಿ ಮೇನಾಲ, ವಿನಯ ಕುಮಾರ್ ಕಂದಡ್ಕ ,ಸುನಿಲ್ ಕೇರ್ಪಳ, ಚನಿಯ ಕಲ್ತಡ್ಕ, ಗಿರೀಶ್ ಕಲ್ಲುಗದ್ದೆ, ಸುಧಾಕರ ಕುರುಂಜಿಭಾಗ್ , ಬೂಡು ರಾಧಾಕೃಷ್ಣ ರೈ, ರಂಜಿತ್ ಎನ್ ಆರ್, ರಾಜೇಶ್ ಮೇನಾಲ,ಕೃಪಾಶಂಕರ ತುದಿಯಡ್ಕ, ಮಧುರಾ ಭಟ್ ಮುಂತಾದವರು ಉಪಸ್ಥಿತರಿದ್ದರು.