ಸುಳ್ಯ: ಹಿರಿಯ ಪತ್ರಕರ್ತೆ, ಲೇಖಕಿ ಚಂದ್ರಾವತಿ ಬಡ್ಡಡ್ಕ ಅವರ ‘ಲಘುಬಿಗು’ ಕೃತಿ 2022ನೇ ಸಾಲಿನ ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ) ದತ್ತಿ ಪ್ರಶಸ್ತಿಯನ್ನು ಕೃತಿಯು ಪಡೆದುಕೊಂಡಿದೆ. ಲೇಖಕಿ ಸಹನಾ ಕಾಂತಬೈಲು ಅವರ ‘ಇದು ಬರಿ ಮಣ್ಣಲ್ಲ’ ಕೃತಿಯು 2021 ನೇ ಸಾಲಿನ ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ) ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಕರ್ನಾಟಕ ಲೇಖಕಿಯರ ಸಂಘದ 2021 ಮತ್ತು


ಚಂದ್ರಾವತಿ ಬಡ್ಡಡ್ಕ ಮತ್ತು ಸಹನಾ ಕಾಂತಬೈಲು
2022ನೇ ಸಾಲಿನ ವಾರ್ಷಿಕ ವಿವಿಧ ದತ್ತಿ ಪ್ರಶಸ್ತಿಗಳಿಗೆ ನಾಡಿನ ವಿವಿಧ ಲೇಖಕಿಯರ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್.ಪುಷ್ಪ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಪ್ರಕಟಿಸಿದ್ದಾರೆ.ಪ್ರಶಸ್ತಿಯು ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಜುಲೈ 23 ರಂದು ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಅಪರಾಹ್ನ 3 ಗಂಟೆಗೆ ನಡೆಯಲಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರು ಹಾಗೂ ಮಾಜಿ ಸಚಿವೆ ರಾಣಿ ಸತೀಶ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದರ ಜೊತೆಗೆ ಸಂಘದ 2020ನೇ ಸಾಲಿನಲ್ಲಿ ಪ್ರಶಸ್ತಿಗೆ ಆಯ್ಕೆಯಾದವರಿಗೂ ಇದೇ ವೇದಿಕೆಯಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಅವರು ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್.ಪುಷ್ಪ ತಿಳಿಸಿದ್ದಾರೆ.
ಹಿರಿಯ ಪತ್ರಕರ್ತರು, ಅಂಕಣಕಾರರಾದ ಚಂದ್ರಾವತಿ ಬಡ್ಡಡ್ಕ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಬಡ್ಡಡ್ಕದವರು. ವಿವಿಧ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ದುಡಿದಿರುವ ಚಂದ್ರಾವತಿ ಬಡ್ಡಡ್ಕ ವೃತ್ತಿಪರ ಅನುವಾದಕರು. ಕನ್ನಡ ಹಾಗೂ ಅರೆಭಾಷೆ ಲೇಖಕರು. ‘ಸುಳ್ಯ ಮಿರರ್” ವೆಬ್ ಸೈಟ್ನ ಅಂಕಣಕಾರರು. ಸಹನಾ ಕಾಂತಬೈಲು ಅವರು ಲೇಖಕಿ ಹಾಗೂ ಹವ್ಯಾಸಿ ಪತ್ರಕರ್ತರು.