ಸುಳ್ಯ:ಹಿರಿಯ ಪತ್ರಕರ್ತೆ, ಲೇಖಕಿ ಚಂದ್ರಾವತಿ ಬಡ್ಡಡ್ಕ ಅವರ ‘ಲಘುಬಿಗು’ ಕೃತಿ 2022ನೇ ಸಾಲಿನ ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದು ಜು.23 ರಂದು ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ) ದತ್ತಿ ಪ್ರಶಸ್ತಿಯನ್ನು
ಕೃತಿಯು ಪಡೆದುಕೊಂಡಿದೆ.ಜುಲೈ 23 ರಂದು ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ, ಮಾಜಿ ಸಚಿವೆ ರಾಣಿ ಸತೀಶ್, ವಿಮರ್ಶಕಿ ಆಶಾ ದೇವಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪ, ಪದಾಧಿಕಾರಿಗಳು ಉಪಸ್ಥಿತರಿದ್ದರು.