ಸುಳ್ಯ:ಇತ್ತೀಚೆಗೆ ಅಗಲಿದ ಕಾರ್ಮಿಕ ಮುಖಂಡ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಲಿಂಗಂ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ಐವರ್ನಾಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.ಮಾಜಿ ಸಚಿವ ಬಿ.ರಮಾನಾಥ ರೈ ದೀಪ ಪ್ರಜ್ವಲಿಸಿ ಚಂದ್ರಲಿಂಗಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಿದರು. ಸುಳ್ಯ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ನ.ಪಂ.ಸದಸ್ಯ ಎಂ.ವೆಂಕಪ್ಪ ಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಶಿವರಾಮ ನೆಕ್ರಪ್ಪಾಡಿ, ಲೋಕನಾಥ ಕಲ್ಲೋಣಿ ನುಡಿನಮನ ಸಲ್ಲಿಸಿದರು.
ಚಂದ್ರಲಿಂಗಂ ಅವರ ಪುತ್ರಿ ಚರಣ್ಯ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಂದ್ರಲಿಂಗಂರವರ ಪತ್ನಿ ಚಂದ್ರಕಾಂತಿ,ಪುತ್ರರಾದ ಚರಣ್ ಪ್ರಸಾದ್,ಅನಿಲ್ ಕುಮಾರ್,ಪುತ್ರಿ ಚಾರ್ಮಿಳಾ ಉಪಸ್ಥಿತರಿದ್ದರು.
ಹಿರಿಯರಾದ ನೆಕ್ರಪ್ಪಾಡಿ ಕೃಷ್ಣಪ್ಪ ಗೌಡ, ಐವರ್ನಾಡು ಪ್ರಾ.ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ,ಗ್ರಾ.ಪಂ.ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಕಾಂಗ್ರೆಸ್ ಮುಖಂಡರಾದ ಪಿ.ಎಸ್.ಗಂಗಾಧರ,ಸುರೇಶ್ ಅಮೈ,ಭವಾನಿಶಂಕರ ಕಲ್ಮಡ್ಕ, ಜಯಪ್ರಕಾಶ್ ನೆಕ್ರೆಪ್ಪಾಡಿ, ಶಶಿಧರ ಎಂ.ಜೆ, ಸರಸ್ವತಿ ಕಾಮತ್, ನಂದರಾಜ ಸಂಕೇಶ,ಗಫೂರ್ ಕಲ್ಮಡ್ಕ,ವಿಶ್ವನಾಥ ರೈ ಕಳಂಜ, ಶಾಂತಾರಾಮ ಕಣಿಲೆಗುಂಡಿ, ನವೀನ್ ಕುಮಾರ್ ಸಾರಕರೆ, ಶಾಫಿ ಕುತ್ತಮೊಟ್ಟೆ ಹಾಗೂ ಗ್ರಾಮಸ್ಥರು,ತಮಿಳು ಕಾರ್ಮಿಕರು ಉಪಸ್ಥಿತರಿದ್ದರು.
ಜನರು ಚಂದ್ರಲಿಂಗಂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಕನ್ನದಾಸನ್ ದರ್ಖಾಸ್ತು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.





