ಸುಬ್ರಹ್ಮಣ್ಯ:ಚಂದ್ರಗ್ರಹಣ ಇರುವುದರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ.7 ರಂದು ಆದಿತ್ಯವಾರ ಶ್ರೀ ದೇವಳದಲ್ಲಿ ದಿನ ನಿತ್ಯದ ಸೇವೆ ಮತ್ತು ದರುಶನ ಹಾಗೂ ಭಕ್ತಾದಿಗಳ ಸೇವಾ ಸಮಯಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಭಕ್ತರು ಸಹಕರಿಸಬೇಕು ಎಂದು ಶ್ರೀ ದೇವಳದ
ಪ್ರಕಟಣೆ ತಿಳಿಸಿದೆ.ಆದಿತ್ಯವಾರ ಶ್ರೀ ದೇವರ ಮಧ್ಯಾಹ್ನದ ಮಹಾಪೂಜೆಯು ಬೆಳಗ್ಗೆ 11 ಗಂಟೆಗೆ ನಡೆಯಲಿದೆ.ರಾತ್ರಿಯ ಮಹಾಪೂಜೆಯು ಸಂಜೆ ಗಂಟೆ 5 ಕ್ಕೆ ನೆರವೇರಲಿದೆ.
ರಾತ್ರಿ ಭೋಜನ ಪ್ರಸಾದ ಇರುವುದಿಲ್ಲ.ಅಲ್ಲದೆ ಸಾಯಂಕಾಲದ ಆಶ್ಲೇಷ ಬಲಿ ಸೇವೆ ಇರುವುದಿಲ್ಲ. ಸರ್ಪಸಂಸ್ಕಾರ ಸೇವೆ ಆರಂಭವಾಗುವುದಿಲ್ಲ. ಶನಿವಾರ ಆರಂಭಗೊಂಡ ಸೇವೆಯು ಆದಿತ್ಯವಾರ ಕೊನೆಗೊಳ್ಳುತ್ತದೆ.ಆದರೆ ಆದಿತ್ಯವಾರ ಸೇವಾರಂಭ ಇಲ್ಲ. ಸಾಯಂಕಾಲ 5 ರಿಂದ ಶ್ರೀ ದೇವರ ದರುಶನ ಇರುವುದಿಲ್ಲ. ಸೆ. 08 ರಂದು ಪಂಚಾಮೃತ ಮಹಾಭಿಷೇಕ ಸೇವೆ ಇರುವುದಿಲ್ಲ. ಆದುದರಿಂದ ಭಕ್ತರು ಸಹಕರಿಸಬೇಕು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.












