ಸುಳ್ಯ:ಸುಳ್ಯ ಶ್ರೀರಾಮ ಪೇಟೆಯ ಶ್ರೀರಾಮ ಮಂದಿರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ.27ರಂದು ಬೆಳಗ್ಗೆ 48 ತೆಂಗಿನಕಾಯಿ ಗಣಪತಿ ಹವನ, ಬಳಿಕ ಚಂಡಿಕಾಯಾಗ, ಲಕ್ಷ ತುಳಸಿ ಅರ್ಚನೆ, ಮಹಾಪೂಜೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.ಫೆ.26ರಂದು ಸಂಜೆ ನಾಗಸನ್ನಿಧಿಯಲ್ಲಿ
ಆಶ್ಲೇಷ ಬಲಿ ಪೂಜೆ, ತಾಯಂಬಕ, ದುರ್ಗಾ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷ- ಗಾನ- ನಾಟ್ಯ ವೈಭವ ಕಾರ್ಯಕ್ರಮ ನಡೆಯಿತು. ಇಂದು 6 ರಿಂದ ಸಮಾರೋಪ ಸಮಾರಂಭ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಸ್.ಅಂಗಾರ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ.ರೇಣುಕಾಪ್ರಸಾದ್ ಕೆ.ವಿ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು, ಮಂಜುನಾಥೇಶ್ವರ ಭಜನಾ ಪರಿಷತ್ನ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ ಉಪಸ್ಥಿತರಿರುವರು.ರಾತ್ರಿ 7ರಿಂದ ಖ್ಯಾತ ಕಲಾವಿದರಿಂದ ಭಕ್ತಿ ಗಾನ ಸುಧೆ ಮತ್ತು ವಾದ್ಯ ಸಂಗೀತ ಜುಗಲ್ ಬಂಧಿ ನಡೆಯಲಿದೆ.